ಮುತಾಲಿಕ್ ಅಭಿಮಾನಿ ಬಳಗ ವತಿಯಿಂದ ಪ್ರಜಾ ವಿಜಯ ಬಹಿರಂಗ ಸಭೆ

ಕಾರ್ಕಳ: ನೈಜ ಹಿಂದುತ್ವದ ಮೂಲಕ ಹಿಂದು ಕಾರ್ಯಕರ್ತರಿಗೆ ಧ್ವನಿಯಾಗುವ ನಾಯಕ , ಪ್ರಮಾಣಿಕತೆ ಸಾಕ್ಷಿಯಾಗಿರುವ ಪ್ರಮೋದ್ ಮುತಾಲಿಕ್ ಅವರನ್ನು ಗೆಲ್ಲಿಸುವಂತೆ ಖ್ಯಾತ ವಾಗ್ಮಿ ವಿಖ್ಯಾತ ರಾವ್ ಅವರು ಮನವಿ ಮಾಡಿಕೊಂಡರು. ಅವರು ಕಾರ್ಕಳ ತಾಲೂಕಿನ ಹೊಸ್ಮಾರ್ ನಲ್ಲಿ ನಡೆದ ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ ವತಿಯಿಂದ ನಡೆದ ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು.

ಸುನೀಲ್ ಕುಮಾರ್ ಪಕ್ಷ ವಿರೋಧಿಗಳ ಬಳಿ ಕಾಲು ಹಿಡಿಯುವ ಬದಲು ನೀವು ಅಧಿಕಾರಕ್ಕೆ ಬರಲುಕಾರಣವಾದ ಸುಚೇತ ಕೊಲೆ ನ್ಯಾಯ ಕೊಡಿಸಿದ್ದಾರೆ ಸಾಕಿತ್ತು,ನೊಂದ ಕಾರ್ಯಕರ್ತರಿಗೆ ದ್ವನಿಯಾಗಿದ್ದರೆ ಸಾಕಿತ್ತು ಎಂದು ಹೇಳಿದರು. ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಮಾತನಾಡಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೇಸ್ ಶ್ರೀ ರಾಮನ ಅಸ್ಮಿತೆಯನ್ನು ಪ್ರಶ್ನಿಸಿತ್ತು. ಆದರೆ ಬಾಬರನ ಪರವಾಗಿ ಅಫಿಡವಿತ್ ಸಲ್ಲಿಸಿತ್ತು. ಆದರೆ ಮೋದಿ ಕೇಂದ್ರ ದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಐದು ಸಹಸ್ರ ವರ್ಷಗಳ ಬಳಿಕ ಶ್ರೀ ರಾಮ ಮಂದಿರ ನಿರ್ಮಾಣ ವಾಗುತ್ತಿದೆ. ಕಾಂಗ್ರೆಸ್ ಪಕ್ಷ ತಿರಸ್ಕರಿಸಿ ಎಂದರು.

ಮುತಾಲಿಕ್ ಅಭಿಮಾನಿ ಬಳಗದ ದಿವ್ಯ ನಾಯಕ್ ಮಾತನಾಡಿ ಗುಳುಂ ಕಾರ್ಡ್ ಬಿಜೆಪಿ ಪಧಾಧಿಕಾರಿಗಳ ಪಾಲಿಗೆ ಬಾಂಬ್ ಅಗಿ ಪರಿಣಮಿಸಿದೆ , ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಸೀದಿ ಕಟ್ಟಿಸಿ ಕೊಡುವೆ ಎಂದು ಹೇಳುತ್ತಿರುವುದು ಹಿಂದುಗಳಿಗೆಮಾಡುತ್ತಿರುವ ಮೋಸ ಎಂದರು. ಸಭೆಯಲ್ಲಿ ದಿವ್ಯ, ವಿವೇಕಾನಂದ ಶೆಣೈ , , ಚಿತ್ತರಂಜನ್ ಶೆಟ್ಟಿ , ಸಂತೋಷ್ ಪುರಾಹಿತ್ ,ಪ್ರವೀಣ್ ಕಾಂತರಗೋಳಿ ವಾಸುದೇವ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.