ಕಾರ್ಕಳ : ಕೊಳಚೆ ನೀರಿನ ದುರ್ವಾಸನೆಯಿಂದ ಸ್ಥಳೀಯ ಜನತೆಗೆ ಸಂಕಷ್ಟ

ಕಾರ್ಕಳ ಪುರಸಭೆ ವ್ಯಾಪ್ತಿಯ ಗಾಂಧಿ ಮೈದಾನದ ಮುಖ್ಯ ರಸ್ತೆಯಲ್ಲಿ ಸುಮಾರು 20 ದಿನಗಳಿಂದ ಒಳ ಚರಂಡಿಯ ನೀರು ಹರಿಯುತ್ತದೆ. ಈ ನೀರು ದುರ್ವಾಸನಿಂದ ಕೂಡಿದ ಪರಿಣಾಮ ಸ್ಥಳೀಯ ವಸತಿ ಸಂಕೀರ್ಣದಲ್ಲಿ ವಾಸಿಸುವ ಜನತೆ ನರಕ ಯಾತನೆ ಅನುಭವಿಸುತ್ತಿದ್ದಾರೆ.

karkala

ಅದಲ್ಲದೆ ಪಕ್ಕದಲ್ಲಿ ಕ್ರೈಸ್ ಕಿಂಗ್ ಚರ್ಚ್ ಹಾಗೂ ಕಾನ್ವೆಂಟ್ ಮತ್ತು ಸಾವಿರಾರು ಮಕ್ಕಳು ಓದುತ್ತಿರುವ ಶಾಲೆಯೂ ಇದೆ. ಎಲ್ಲರೂ ಈ ತ್ಯಾಜ್ಯ ನೀರಿನ ದುರ್ವಾಸನೆಯನ್ನು ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ತ್ಯಾಜ್ಯ ನೀರಿನಿಂದಾಗಿ ಸ್ಥಳೀಯ ಬಾವಿಯ ನೀರು ಮಲಿನ ಗೊಂಡಿದೆ. ಸ್ಥಳೀಯರು ಪುರಸಭೆಗೆ ದೂರನ್ನು ನೀಡಿದಾಗ ಪುರಸಭೆ ಅಧಿಕಾರಿಗಳು ಸಮಸ್ಯೆಯನ್ನು ಪರಿಶೀಲಿಸಿ ಹೋಗುತ್ತಾರೆ ವಿನಹ ಅದನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Related Posts

Leave a Reply

Your email address will not be published.