ಕಾರ್ಕಳ ಪರಪ್ಪು ಸೇತುವೆ ಕೆಳಭಾಗದಲ್ಲಿ ತ್ಯಾಜ್ಯಗಳ ರಾಶಿ
ಕಾರ್ಕಳದ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹದ ವ್ಯವಸ್ಥೆಗಳು ಸಾಕಷ್ಟಿದ್ದರೂ, ಪರಪ್ಪು ಸೇತುವೆ ತಳಭಾಗದಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದು ದುರಂತವೇ ಸರಿ. ಇಲ್ಲಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾರ್ಕಳ ನಗರದಿಂದ ಕುಕ್ಕುಂದೂರು ಗ್ರಾಮದ ಮೂಲಕ ನಕ್ರೆ ಮಾರ್ಗವಾಗಿ ಉಡುಪಿ ಸಂಪರ್ಕಿಸುವ ಪರಪ್ಪು ಸೇತುವೆ ತಳಭಾಗ ತ್ಯಾಜ್ಯ ಹಾಗೂ ಮಣ್ಣು ರಾಶಿಯಿಂದ ತುಂಬಿ ಹೋಗಿದೆ ಸೇತುವೆ ತ್ಯಾಜ್ಯ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ.
ಕಾರ್ಕಳ ನಗರಕ್ಕೆ ಹೊಂದಿಕೊಂಡು ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಗಳಿವೆ. ಇಷ್ಟಿದ್ದರೂ ಸೇತು ಕೆಳಭಾಗಕ್ಕೆ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದು ದೈನಂದಿನ ಕೆಲಸವಾಗಿದೆ. ಇದರ ಪರಿಣಾಮ ಸೇತುವೆ ಕೆಳಭಾಗದಲ್ಲಿ ಬಟ್ಟೆ ಪ್ಲಾಸ್ಟಿಕ್ ಚೀಲ ಗೋಣಿಚೀಲ, ಹಾಸಿಗೆ ತಲೆದಿಂಬು ಬಿಸಾಡುವುದರ ಪರಿಣಾಮವಾಗಿ ಸೇತುವೆ ಅಡಿಭಾಗ ಕೊಳಚೆ ಪ್ರದೇಶವಾಗಿ ಬದಲಾಗಿದೆ. ಸೇತುವೆ ಮೇಲಿಂದ ತ್ಯಾಜ್ಯಗಳನ್ನು ಸೇತುವೆ ಕೆಳಗೆ ಎಸೆಯಲಾಗುತ್ತದೆ.
ಕೊಳೆತ ಮಾಂಸ ತರಕಾರಿ ಹಸಿ ಕಸಗಳನ್ನೆಲ್ಲ ಇಲ್ಲಿ ತಂದು ಸುರಿತ್ತಿರುವುದರಿಂದ ಸೇತುವೆ ತಳಭಾಗ ಬಾಗ ಸಂಪೂರ್ಣ ಕೊಚ್ಚಿಯಿಂದ ತುಂಬಿ ಪರಿಸರ ಮಲಿನವಾಗಿದೆ. ಮಳೆಗಾಲದಲ್ಲಿ ಮಳೆ ನೀರು ಹರಿದು ಬರೋ ಹೊತ್ತಿಗೆ ನಗರದ ವಿವಿಧಡೆಯ ಕೊಳಚೆ ಕೂಡ ತೋಡು ನೀರಿನೊಂದಿಗೆ ಸೇರಿ ಹರಿಯುತ್ತದೆ ಸದ್ಯ ಈಗ ತೋಡಿನಲ್ಲಿ ನೀರು ಹರಿಯುತ್ತಿಲ್ಲವಾದರೂ ಸೇತುವೆ ಕೆಳಗೆ ನೀರು ಸಂಗ್ರಹ ಗೊಂಡಿದ್ದು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ನಕರೆ, ಕೆಳಭಾಗದಲ್ಲಿ ಕಿಂಡಿ ಆಣೆಕಟ್ಟು ಅರೆ ಬರೆಯಲಿ ಕಂಡುಬರುತ್ತಿದ್ದು ಇದರಿಂದ ಹರಿಯುವ ನೀರಿಗೆ ತಡೆ ಉಂಟಾಗಿದೆ. ಇದರಿಂದ ಸೇತುವೆ ಕೆಳಗೆ ಕೊಳಚೆ ನೀರು ಸಂಗ್ರಹಗೊಂಡಿದೆ ಇದರಲ್ಲಿ ಬಿಸಾಕಿದ ತ್ಯಾಜ್ಯ ಸೇರಿ ತೇಲಾಡುತ್ತಿವೆ ಪರಿಸರದಲ್ಲಿ ದುರ್ವಾಸನೆ ಹೆಚ್ಚಾಗಿದೆ. ಗ್ರಾಮ ಪಂಚಾಯತಿ ಕಚೇರಿಯಿಂದ ಕೂಗಳತೆ ದೂರದಲ್ಲಿ ಇರುವ ಇಲ್ಲಿ ಸೇತುವೆ ಬಳಿ ತ್ಯಾಜ್ಯ ಬಿಸಾಕುವವರನ್ನು ಪತ್ತೆಹಚ್ಚಲು ಸಿಸಿ ಕ್ಯಾಮರಗಳನ್ನು ಅಳವಡಿಸಬೇಕು. ಸೇತುವೆ ಎರಡು ಬದಿಗಳಲ್ಲಿ ಕಬ್ಬಿಣದ ಜಾಲರಿಯನ್ನು ಹಾಕಬೇಕು ಇದನ್ನು ಎರಡು ಅಳವಡಿಸಿದರೆ ತ್ಯಾಜ್ಯ ತಂದು ಬಿಸಾಕದಂತೆ ತಡೆಯಬಹುದು ಎಂದು ಹೇಳಿದರು. ಅದಲ್ಲದೆ ಈ ತೋಡಿನಲ್ಲಿರುವ ಮರಳು ಮಿಶ್ರಿತ ಮಣ್ಣನ್ನು ತೆಗೆದರೆ ಬೇಸಿಗೆಯಲ್ಲಿ ಧಾರಾಳವಾಗಿ ನೀರು ಪರಿಸರಕ್ಕೆ ಸಿಗಬಹುದು ಎಂದು ಹೇಳಿದರು.