ನೆಲ್ಯಾಡಿಯ ಶಿಕ್ಷಕಿ ಮೇರಿ ಜಾನ್ ಕಾರ್ಮಲ್ ಭವನ್ ಗೆ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ
ಪ್ರತಿಷ್ಟಿತ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಯನ್ನು ಹಿರಿಯ ಶಿಕ್ಷಕಿ ಹಾಗೂ ಜಾನಪದ ಕಲಾವಿದೆ ಮೇರಿ ಜಾನ್ ಗೆ ಮಂಗಳೂರಿನಲ್ಲಿ ನಡೆದ ಜಾನಪದ ಪರಿಷತ್ ನ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ನೆಲ್ಯಾಡಿ ಯ ಪಿ ಎಂ ಶ್ರೀ ಉನ್ನತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಶಿಕ್ಷಕಿಯಾಗಿದ್ದಾರೆ. ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಶ್ರೀಮತಿ ಮೇರಿ ಜಾನ್ ಅವರನ್ನು ಅಭಿನಂದಿಸಿ ಚರ್ಚ್ ನ ಧರ್ಮಗುರುಗಳಾದ ಫಾ.ಶಾಜಿ ಮ್ಯಾಥ್ಯು ಶಿಕ್ಷಣ ಮತ್ತು ಕಲೆ ಇವೆರಡರ ಸಮ್ಮಿಲನದ ಮೂಲಕ ಮೌಲ್ಯ ಆಧಾರಿತ ಶಿಕ್ಷಣ ನೀಡಲು ಸಾಧ್ಯ ಎಂದು ಮೇರಿ ಜಾನ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಇವರ ಪತಿ ಭಾರತೀಯ ಭೂ ಸೇನೆಯ ನಿವೃತ್ತ ಸೈನಿಕ.