ಕಾಸರಗೋಡು: ಅಂಬಲತ್ತರದಲ್ಲಿ ಪತ್ತೆಯಾದ ಖೋಟಾ ನೋಟು

ಕಾಸರಗೋಡು ಜಿಲ್ಲೆಯ ಕಾಞಾಂಗಾಡ್ ಸಮೀಪ ಅಂಬಲತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ರೂ 2 ಸಾವಿರ ಮುಖಬೆಲೆಯ 7.25 ಕೋಟಿ ರೂ ಪತ್ತೆಯಾಗಿದ್ದು ತನಿಖೆಯ ವೇಳೆ ಇವೆಲ್ಲವೂ ಖೋಟಾ ನೋಟುಗಳು ಎಂದು ತನಿಖೆಯಿಂದ ಸ್ಪಷ್ಟವಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ನಿವಾಸಿ ಸುಲೈಮಾನ್ ಸಹಿತ ಹಾಗೂ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.ಅಂಬಲತರ ಠಾಣಾ ವ್ಯಾಪ್ತಿಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಸುಳ್ಯದ ಸುಲೈಮಾನ್ ಹಾಗೂ ಪೆರಿಯಾ ನಿವಾಸಿ ಅಬ್ದುಲ್ ರಜಾಕ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರಕರಣದಲ್ಲಿ ಪುತ್ತೂರಿನ ವ್ಯಕ್ತಿ ಓರ್ವರ ಕೈವಾಡ ಇರುವುದು ತನಿಖೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ

Related Posts

Leave a Reply

Your email address will not be published.