ಉಡುಪಿ: ಅನಾರೋಗ್ಯ ಪೀಡಿತ ಕುಟುಂಬಕ್ಕೆ ಬೇಕಾಗಿದೆ ಸಹಾಯ ಹಸ್ತ

ಸರಕಾರಿ ಕೆಲಸದಿಂದ ನಿವೃತ್ತಿ ಹೊಂದಿ ಗಂಡನೊಂದಿಗೆ ತನ್ನ ಮುದ್ದಾದ ಮಗುವಿನೊಂದಿಗೆ ಸುಂದರವಾದ ಬದುಕಿನ ಕನಸು ಕಾಣುತ್ತಿದ್ದ ಆ ಮುದ್ದಾದ ಕುಟುಂಬಕ್ಕೆ, ಅದ್ಯಾರ ಕಣ್ಣು ಬಿತ್ತೋ.. ಗೊತ್ತಿಲ್ಲ.! ಬೈಕ್ ಸಾವರನೊಬ್ಬನ ಅತೀವೇಗ , ಅತೀ ಅವಸರ ಇಡೀ ಕುಟುಂಬವನ್ನೇ ಜೀವನಪೂರ್ತಿ ಕಣ್ಣೀರ ಕಡಲಲ್ಲಿ ಕಳೆಯುವಂತೆ ಮಾಡಿದೆ ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.

ಇವರು ಉಡುಪಿಯ ವೈ ರಮೇಶ್ ಭಟು, ಈ ಹಿಂದೆ ಉಡುಪಿಯ ರೇಷ್ಮೆ ಇಲಾಖೆಯಲ್ಲಿ ಸುಮಾರು 12 ವರ್ಷಗಳ ಕಾಲ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ ನಂತರ ಖಾಯಂ ಸರ್ಕಾರಿ ನೌಕರನಾಗಿ ಮಂಗಳೂರಿಗೆ ವರ್ಗಾವಣೆ ಗೊಂಡು ಅಲ್ಲಿ ಒಂದಷ್ಟು ವರ್ಷ ಸೇವೆ ಸಲ್ಲಿಸಿ. ನಂತರ ಶಿಕ್ಷಣ ಇಲಾಖೆಗೆ ವರ್ಗಾವಣೆ ಗೊಂಡು ದ್ವಿತೀಯ ದರ್ಜೆ ಸಹಾಯಕರಾಗಿ ಉಡುಪಿಯ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲವು ವರ್ಷಗಳ ಸೇವೆ ಸಲ್ಲಿಸಿ, ನಂತರ ಪಂಚಾಯತ್ ರಾಜ್ ಇಲಾಖೆಗೆ ವರ್ಗಾವಣೆ ಗೊಂಡು.ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಹತ್ತಾರು ವರ್ಷ ಸೇವೆಸಲ್ಲಿಸಿದ್ದಾರೆ.

ನಂತರ ಉಡುಪಿ ತಾಲೂಕು ಪಂಚಾಯತ್ ಗೆ ವರ್ಗಾವಣೆ ಗೊಂಡು ಅಲ್ಲಿಯೂ ದ್ವಿತೀಯ ದರ್ಜೆ ಸಹಾಯಕರಾಗಿ ಹತ್ತಾರು ವರ್ಷ ಸೇವೆ ಸಲ್ಲಿಸಿ.ಅಲ್ಲೇ ನಿವೃತ್ತಿ ಹೊಂದಿದ್ದಾರೆ.ಹಾಗಾಗಿ ಉಡುಪಿ ಜಿಲ್ಲೆಯ ಹೆಚ್ಚಿನ ಸರಕಾರಿ ನೌಕರರಿಗೆ ಮತ್ತು ಜಿಲ್ಲೆಯ ಜನತೆಗೆ ರಮೇಶ್ ಭಟ್ ತುಂಬಾನೇ ಪರಿಚಿತರು. ಪತ್ನಿ ಶೈಲಾ ಭಟ್ 2019ರಲ್ಲಿ ತನ್ನ ಅಕ್ಕನ ಮಗನೊಂದಿಗೆ ಬೈಕ್ ನಲ್ಲಿ ಮಣಿಪಾಲಕ್ಕೆ ತೆರಳುತ್ತಿದ್ದ ಸಂಧರ್ಭ, ಧೀಢೀರಾಗಿ ಬೈಕ್ ಸವಾರನೊಬ್ಬ ಅಡ್ಡ ಬಂದ ಪರಿಣಾಮ, ಅಫಘಾತ ತಪ್ಪಿಸಲು ಬೈಕಿನ ಬ್ರೇಕ್ ಹಾಕಲಾಗಿತ್ತು. ಹೀಗಾಗಿ ಹಿಂಬದಿಯಲ್ಲಿ ಕೂತಿದ್ದ ಶೈಲ ಭಟ್ ರಸ್ತೆ ಗೆ ಎಸೆಯಲ್ಪಟ್ಟಿದ್ದರು, ಅಂದು ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಶೈಲಾ ಭಟ್ ಈವರೆಗೂ ಹಾಸಿಗೆಯಿಂದ ಏಳುವ ಪರಿಸ್ಥಿತಿಯಲ್ಲಿ ಇಲ್ಲ.

ಸರಿಯಾಗಿ ಊಟವೂ ಸೇರುತ್ತಿಲ್ಲ, ಒಂದಷ್ಟು ದ್ರವಹಾರಗಳಿಂದ ಬದುಕಿ ಉಳಿದಿದ್ದಾರೆ. ಇತ್ತ ರಮೇಶ್ ಭಟ್ ಅತಿಯಾದ ಮಧುಮೇಹ ಖಾಯಿಲೆಯಿಂದ ತನ್ನ ಕಾಲಿನ ಬೆರಳುಗಳನ್ನು ಕಳೆದುಕೊಂಡಿದ್ದಾರೆ.ತನಗೆ ಬರುವ ಒಂದಷ್ಟು ಪೆನ್ಶನ್ ಹಣ ಮನೆ ಬಾಡಿಗೆ, ಮದ್ದಿಗೆ ಸಾಕಾಗುತ್ತಿಲ್ಲ. ಅತ್ತ ಕೆಲಸಕ್ಕೂ ಹೋಗುವಂತಿಲ್ಲ. ಮಡದಿಯ ಎಲ್ಲ ದಿನಚರಿಗಳನ್ನು ನೋಡಿಕೊಳ್ಳಬೇಕು.ಶಾಲೆಗೆ ಹೋಗುವ ಮಗುವನ್ನು ನೋಡಿಕೊಳ್ಳಬೇಕು, ಶಾಲಾ ಫೀಸಿಗೂ ಹಣವಿಲ್ಲ, ಹಾಸಿಗೆಯಲ್ಲಿ ಮಲಗಿರುವ ಹೆಂಡತಿಯ ಚಿಕಿತ್ಸೆ ಗೂ ಹಣವಿಲ್ಲ.

ಶೈಲ ಭಟ್ ರವರ ಚಿಕಿತ್ಸೆಗೆ ಸುಮಾರು ಮೂರರಿಂದ ನಾಲ್ಕು ಲಕ್ಷ ವೆಚ್ಚವಾಗಬಹುದು.ಮಗುವಿನ ಶಾಲಾ ಖರ್ಚಿಗೂ ಅರ್ಥಿಕ ಸಹಾಯ ಬೇಕಾಗಿದೆ.ಇಂತಹ ಸಂಕಷ್ಟದಲ್ಲಿ ರುವ ಈ ಕುಟುಂಬಕ್ಕೆ ದಾನಿಗಳ ನೆರವು ಬೇಕಾಗಿದೆ.ಸದೃಹಿಗಳು ಬಡ ಕುಟುಂಬದ ಸಹಾಯ ಮಾಡಲು ಮುಂದೆ ಬರಬೇಕಾಗಿದೆ.

ಸಹಾಯ ಮಾಡಲಿಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಅಕೌಂಟಿಗೆ ಹಣವನ್ನು ಕಳುಹಿಸಬಹುದು, 918073592451 ನಂಬರ್ ಗೆ ಗೂಗಲ್ ಪೇ ನೂ ಮಾಡಬಹುದು, ಸ್ಕ್ಯಾನರ್ ಕೂಡ.ಸ್ಕ್ರೀನ್ ಮೇಲೆ ನೀಡಲಾಗಿದೆ.

ರಮೇಶ್ ಭಟ್

Account No: 110077335099

NAME: Y RAMESH BHAT

CANARA BANK. COURT ROAD, UDUPI-576101

Mobile:918073592451

Related Posts

Leave a Reply

Your email address will not be published.