ಕಿನ್ನಿಗೋಳಿ : ಶಾಲಾ ಬಾಲಕನಿಗೆ ಬಸ್ ಢಿಕ್ಕಿ, ಬಾಲಕ ಸ್ಥಳದಲ್ಲೇ ಮೃತ್ಯು

ಶಾಲಾ ಬಾಲಕನಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಧಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಕಟೀಲು ಹೆದ್ದಾರಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಚರಣ್ (15) ಗುರುತಿಸಲಾಗಿದೆ. ಚರಣ್ ಕಟೀಲು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವಾಗ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಚರಣ್ ಸ್ಧಳದಲ್ಲಿಯೇ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಸ್ಧಳಕ್ಕೆ ಮೂಲ್ಕಿ ಪೊಲಿಸ್ ಹಾಗೂ ಮ0ಗಳೂರು ಉತ್ತರ ಟ್ರಾಫಿಕ್ ಪೆÇೀಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಸಿಕೊ0ಡಿದ್ದಾರೆ
