ಶಾಲಾ ಬಾಲಕನಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಧಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಕಟೀಲು ಹೆದ್ದಾರಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಚರಣ್ (15) ಗುರುತಿಸಲಾಗಿದೆ. ಚರಣ್ ಕಟೀಲು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವಾಗ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಖಾಸಗಿ
ಸುರತ್ಕಲ್ ಟೋಲ್ ಗೇಟ್ ತೆರವಾಗಿರುವ ಹಿನ್ನಲೆಯಲ್ಲಿ ಕಿನ್ನಿಗೋಳಿ ಹಳೆಯಂಗಡಿ ನಡುವೆ ಸಂಚರಿಸುವ ಎಲ್ಲಾ ಬಸ್ಗಳ ಟಿಕೆಟ್ ದರದಲ್ಲಿ ಡಿ.20 ರಿಂದ 2ರೂ ಕಡಿತ ಮಾಡಲಾಗುವುದು, ಕಿನ್ನಿಗೋಳಿಯಿಂದ ಮುಕ್ಕ ತನಕ ಹಿಂದಿನ ದರವೇ ಇರಲಿದೆ ಎಂದು ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ
ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ವತಿಯಿಂದ ಕೊರಗರ ಭೂಮಿ ಹಬ್ಬ ’ನಮ್ಮ ಭೂಮಿ ನಮ್ಮ ಹಕ್ಕು’ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಕೊರಗರ ಬಲೆಪುವಿನಲ್ಲಿ ಗುರುವಾರ ನಡೆಯಿತು.ಬಳ್ಕುಂಜೆ ತಾಲ್ಯಾನ್ ಮನೆತನ ಗುರಿಕಾರರಾದ ಜಬ್ಬ ಕೊರಗ ಅವರು ಹಬ್ಬದ ಜ್ಯೋತಿ ಬೆಳಗಿಸಿ ಧ್ವಜಾರೋಹಣ ನೆವೇರಿಸಿದರು. ಕೊರಗ ಸಮುದಾಯದ ಹಿರಿಯ ಮಹಿಳೆ ಕಾಳಿ ಅವರು ಹಬ್ಬದ ಸಿಹಿಜೇನು ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ
ಕೈಮಗ್ಗದ ಸೀರೆಗಳನ್ನು ಹಾಗೂ ಖಾದಿ ವಸ್ತ್ರಗಳನ್ನು ಧರಿಸಲು ಜನತೆ ಹೆಚ್ಚಿನ ಒಲವು ತೋರಿಸಬೇಕು, ಈ ರೀತಿ ಮಾಡಿದರೆ ಮಾತ್ರ ಖಾದಿ ಮತ್ತು ಕೈಮಗ್ಗವನ್ನು ಉಳಿಸಲು ಸಾಧ್ಯ , ಈ ನಿಟ್ಟಿನಲ್ಲಿ ಉಡುಪಿ ಸೀರೆಯನ್ನು ಜನಪ್ರಿಯತೆಗೊಳಿಸಿದ ಕದಿಕೆ ಟ್ರಸ್ಟ್ನ ಕೆಲಸ ಶ್ಲಾಘನೀಯವಾದುದು ಎಂದು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾದ ಕನ್ನಡಿಗ ರಾಜ್ಯಸಭಾ ಸದಸ್ಯ ಅನಿಲ್ ಪ್ರಸಾದ್ ಹೆಗ್ಡೆ ಅವರು ಹೇಳಿದರು.ಮಂಗಳೂರು ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸಂಘದಲ್ಲಿ ಕದಿಕೆ