ಕಡಬ: ದೈವಾರಾಧನೆಯ ನರ್ತನ ಪ್ರದರ್ಶನ ಮೆರವಣಿಗೆಗಳಲ್ಲಿ ಪ್ರದರ್ಶಿಸುವುದು ತರವಲ್ಲ: ಕಿಟ್ಟು ಕಲ್ಲುಗುಡ್ಡೆ

ನಮ್ಮ ಧಾರ್ಮಿಕ ಆಚರಣೆಯ ಮೆರವಣಿಗೆಗಗಳಲ್ಲಿ ದೈವಾರಾಧನೆಯ ನರ್ತನ ಪ್ರದರ್ಶನ ಮಾಡುವುದು ಸರಿಯಲ್ಲ. ಈ ಬಗ್ಗೆ ಜನರಿಗೆ ತಿಳವಳಿಕೆ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ದೈವಾರಾಧನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಹೇಳಿದರು.

ಅವರು ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೈವಗಳ ನರ್ತನ ದೈವದ ಕೊಡಿಯಡಿಯಲ್ಲೇ ನಡೆಯಬೇಕು ಹೊರತು ಹಾದಿಬೀದಿಯಲ್ಲಿ ನಡೆಯಬಾರದು ಯಾಕೆಂದರೆ ಅದಕ್ಕೊಂದು ಕಟ್ಟುಕಟ್ಟಲೆ ನೀತಿ ನಿಯಮವಿದೆ. ಗಣೇಶೋತ್ಸವ, ಶಾರದೋತ್ಸವ, ನವರಾತ್ರಿ ಉತ್ವದಂತಹ ಮೆರವಣಿಗೆಗಳಲ್ಲಿ ದೈವಕ್ಕೆ ಕಟ್ಟುವ ಪ್ರದರ್ಶನ ಮಾಡುವುದರಿಂದ ದೈವಾರಾಧನೆ ಮಾಡುವ ಜನರ ಭಾವನೆಗೆ ಘಾಸಿಯಾಗುತ್ತದೆ, ದೈವರಾಧನೆ ಯಾವತ್ತು ಅಪಭ್ರಂಶ ಆಗಬಾರದು ಎಂದರು. ನಮ್ಮಲ್ಲಿ ದೈವಾರಧನೆಯ ಬಗ್ಗೆ ಕೆಲವರಿಗೆ ಸ್ಪಷ್ಟ ಅರಿವಿಲ್ಲ. ತುಳುನಾಡಿನಲ್ಲಿ ದೈವಾರಧನೆ ಮಾಡುವಾಗ ಅದಕ್ಕೆ 16 ಕಟ್ಟಲೆ ಎನ್ನುವ ನಿಯಮವಿದೆ. ದೈವಾಧನೆ ಯಾವಾಗಲೂ ಮಾಡುವ ಪದ್ಧತಿಯಿಲ್ಲ ಸಿಕ್ಕಸಿಕ್ಕವರು ದೈವ ನರ್ತನ ಮಾಡುವ ಕ್ರಮವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ನಿಕಟಪೂರ್ವಾಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ನಲಿಕೆ ಸಮಾಜ ಸೇವಾ ಸಂಘದ ದೈವಾರಾಧನ ಸಮಿತಿಯ ಕಡಬ ತಾಲೂಕು ಉಪಾಧ್ಯಕ್ಷ ಅಣ್ಣು ಪಣೆಮಜಲು ಉಪಸ್ಥಿತರಿದ್ದರು.

Related Posts

Leave a Reply

Your email address will not be published.