ಕೊಲ್ಲೂರು : ವ್ಯಕ್ತಿ ನಾಪತ್ತೆ
ಬೈಂದೂರು: ದಿನಾಂಕ 5/4/ 2023 ರಂದು ರಾತ್ರಿ 8.30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಕೋಡಿಹಳ್ಳಿ ಗ್ರಾಮದ ನಿವಾಸಿಯಾದ ವೆಂಕಟರಾಮಪ್ಪ ವಯಸ್ಸು 55 ತಂದೆ: ದಿವಂಗತ ರಾಮಪ್ಪ ಎಂಬುವರು ದೇವಸ್ಥಾನಕ್ಕೆ ಹೊರಟು ಅಲ್ಲಿ ದಿನಾಂಕ 6/4/ 2023 ರಂದು ಲಲಿತಾಂಬಿಕಾ ಗೆಸ್ಟ್ ಹೌಸಿನಲ್ಲಿ ಉಳಿದುಕೊಂಡವರು ಬೆಳಗಿನ ಜಾವ ನಾಲ್ಕು ಗಂಟೆಗೆ ಬಹಿರ್ದೆಸೆಗೆ ಎಂದು ಹೋದವರು ನಾಪತ್ತೆಯಾಗಿರುತ್ತಾರೆ ಎಂದು ಅನಿಲ್ ಕುಮಾರ್ ರವರು ಕೊಲ್ಲೂರು ಠಾಣೆಗೆ ಲಿಖಿತ ದೂರು ನೀಡಿರುತ್ತಾರೆ. ಸದರಿ ಕಾಣೆಯಾದವರು ವೆಂಕಟರಮಣ ಎಂಬುವರು ತಮ್ಮ ಊರಿನ ಗ್ರಾಮಸ್ಥರೊಂದಿಗೆ ಪ್ರಸಿದ್ಧ ದೇವಸ್ಥಾನಗಳ ಯಾತ್ರೆ ಬಗ್ಗೆ ದಿನಾಂಕ 4/4/ 2023 ರಂದು ತಮ್ಮ ಪರಿಚಯದ ರಘನಾಥ ರೆಡ್ಡಿ, ಶಿವಕುಮಾರ್, ಶಿವಪ್ಪ ಹಾಗೂ ಇತರರೊಂದಿಗೆ ಕೆ 11 ಎ 8929ನೇ SVS ಟೂರ್ ಅಂಡ್ ಟ್ರಾವೆಲ್ಸ್ ಬಸ್ಸಿನಲ್ಲಿ ಹೊರಟು ದಿನಾಂಕ 5/4/ 2023ರ ರಾತ್ರಿ 8 ಗಂಟೆಗೆ ಕೊಲ್ಲೂರಿನ ಲಲಿತಾಂಬಿಕ ಗೆಸ್ಟ್ ಹೌಸಿನಲ್ಲಿ ರೂಮ್ ಪಡೆದುಕೊಂಡಿರುತ್ತಾರೆ.ಸದ್ರಿ ವ್ಯಕ್ತಿ ಬಹಿರ್ಧೇಶೆ ಗೆ ಹೊರಗೆ ಹೋದವರು ಮತ್ತೆ ವಾಪಸು ಬಂದಿರುವುದಿಲ್ಲ.ಆದರೆ ಸದ್ರಿಯವರನ್ನು ಹುಡುಕಾಡಿದರೂ ಈ ತನಕ ಪತ್ತೆ ಆಗಿರುವುದಿಲ್ಲ. ಹಾಗೂ ಅವರ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ ಎಂದು ಲಿಖಿತ ದೂರು ನೀಡಿರುತ್ತಾರೆ.ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿಯ ಚಹರೇ ಈ ರೀತಿ ಇದೆ
ಹೆಸರು- ವೆಂಕಟರಾಮಪ್ಪ
ವಯಸ್ಸು— 55
ತಂದೆ—-ದಿವಂಗತ ರಾಮಪ್ಪ ಕೊತ್ತೂರು ಪಂಚಾಯತ್ ಗೌರಿಬಿದನೂರು ತಾಲೂಕು ಚಿಕ್ಕ ಬಳ್ಳಾಪುರ ಜಿಲ್ಲೆ.
ಎತ್ತರ__ ಐದು ಅಡಿ 2 ಇಂಚು ಕೋಲು ಮುಖ ಸಾಧಾರಣ ಶರೀರ ಎಣ್ಣೆ ಕಪ್ಪು ಮೈಬಣ್ಣ ಕಪ್ಪು ಮತ್ತು ಬಿಳಿ ತಲೆ ಕೂದಲು ಬಲಗಾಲಿನಲ್ಲಿ ಕಪ್ಪು ಮಚ್ಚೆ ಇರುತ್ತದೆ
ಅರಿಸಿರುವ ಬಟ್ಟೆ— ಬಿಳಿ ಮತ್ತು ಪರ್ಪಲ್ ಬಣ್ಣ ಮಿಶ್ರಿತ ತುಂಬು ತೋಳಿನ ಅಂಗಿ ಮತ್ತು ನೀಲಿ ಚೌಕುಳಿ ಪಂಚೆಧರಿಸಿರುತ್ತಾರೆ. ಇವರು ತೆಲುಗು ಭಾಷೆಯನ್ನು ಮಾತನಾಡುತ್ತಾರೆ
ಈ ಮೇಲ್ಕಾಣಿಸಿದ ಕಾಣಿಸಿದ ವ್ಯಕ್ತಿ ಪತ್ತೆಯಾದಲ್ಲಿ ಕೂಡಲೇ ಕೊಲ್ಲೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕಾಗಿ ಠಾ ಣಾಧಿಕಾರಿಯವರು ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ