ಕಾರ್ಕಳ: ಕೌಡೂರು ವ್ಯಾಪ್ತಿಯಲ್ಲಿ 4 ಜನರ ಮೇಲೆ ಚಿರತೆ ದಾಳಿ
ಹೊಂಚು ಹಾಕಿ ಸಂಚು ಮಾಡಿ ಸಾಕು ಪ್ರಾಣಿಗಳನ್ನ ಬೇಟೆಯಾಡುತ್ತಿದ್ದ ಬೇಟೆಗಾರ ಪ್ರಾಣಿ ಇದು. ಇತ್ತೀಚಿನ ದಿನಗಳಲ್ಲಿ ಬೇಟೆಯ ಬದಲಿಗೆ ಸ್ಥಳೀಯರ ಮೇಲೆ ದಾಳಿ ಮಾಡುವ ಮೂಲಕ ಭಯ ಹುಟ್ಟಿಸಿದೆ. ಎರಡು ಮೂರು ದಿನಗಳ ಅಂತರದಲ್ಲಿ ನಾಲ್ಕು ಜನರಿಗೆ ದಾಳಿ ಮಾಡಿ ಪರಾರಿಯಾಗಿರುವ ಈ ಚಿರತೆ, ಸೆರೆ ಹಿಡಿಯಲು ಅರಣ್ಯ ಇಲಾಖೆ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದೆ…
ಹೌದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕೌಡೂರು ಗ್ರಾಮ ಪಂಚಾಯಿತಿ ಬಹುತೇಕ ಕಿರು ಅರಣ್ಯ ವೇ ತುಂಬಿರುವ ಪ್ರದೇಶ. ಈ ಭಾಗದಲ್ಲಿ ಚಿರತೆ, ಕುರ್ಕ ಮೊದಲಾದ ಕಾಡುಪ್ರಾಣಿಗಳು ಸರ್ವೇಸಾಮಾನ್ಯ ಎಂದರೆ ತಪ್ಪಾಗಲಾರದು. ಈ ಮೊದಲು ಸಾಕುಪ್ರಾಣಿಗಳ ಮೇಲೆ ಆರು ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ಎರೆಗುತ್ತಿದ್ದ ಈ ಕಾಡುಪ್ರಾಣಿಗಳು ಸದ್ಯ ತಮ್ಮ ವರಿಸಿ ಬದಲಿಸಿವೆ. ಕಳೆದ ಎರಡು ಮೂರು ದಿನಗಳ ಹಿಂದೆ ಕೌಡೂರು ನಾಗಂಟೆಲ್ ಬಳಿ ಸರಿಸುಮಾರು ನಾಲ್ಕು ಜನರಿಗೆ ಚಿರತೆಯೊಂದು ದಾಳಿ ಮಾಡಿ ಕಾಡಿನಲ್ಲಿ ಕರಗಿ ಮಾಯವಾಗಿದೆ. ಮನೆಯ ಮುಂಭಾಗದಲ್ಲಿ ಮಲಗಿದ್ದ ಸಾಕು ನಾಯಿಯನ್ನು ಬೇಟೆಯಾಡಲು ಬಂದ ಚಿರತೆ ಮನೆಯ ಯಜಮಾನನಿಗೆ ದಾಳಿ ಮಾಡಿ ಗಾಯಗೊಳಿಸಿದ ಘಟನೆಯು ನಡೆದಿದೆ.
ಮುಂಜಾನೆ ಎಂದಿನಂತೆ ಎದ್ದು ದೈನಂದಿನ ಕೆಲಸ ಕಾರ್ಯಗಳಿಗೆ ಹೊರಡಲು ಹಣೆಯಾಗುತ್ತಿದ್ದ ಸುಧೀರ್ ನಾಯ್ಕ್ ಎನ್ನುವರ ಮೇಲೆ ಚಿರತೆ ದಾಳಿ ಮಾಡಿದೆ. ಇಂದಿನಂತೆ ಪಾಠ ಪ್ರವಚನಕ್ಕಾಗಿ ಮನೆಯಿಂದ ಹೊರ ಬಂದ ಸುಧೀರ್ ನಾಯಕ್ ಅವರ ಮಗಳು ಸುದೀಕ್ಷ ಮೇಲೆ ಮೊದಲು ಚಿರತೆ ದಾಳಿ ಮಾಡಲು ಯತ್ನಿಸಿದೆ ಇದನ್ನು ತಪ್ಪಿಸಲು ಪ್ರಯತ್ನಿಸಿದ ಸುಧೀರ್ ನಾಯಕ್ ಮೇಲೆ ಹಾರಿದ ಚಿರತೆ ತುಟಿ ಭಾಗಕ್ಕೆ ಪರಚಿ ಗಂಭೀರವಾಗಿ ಗಾಯಗೊಳಿಸಿದೆ. ಸುಧೀರ್ ನಾಯಕ್ ಮನೆಯ ಮುಂಭಾಗದಲ್ಲಿ ಮಲಗಿದ್ದ ಸಾಕು ನಾಯಿಯನ್ನು ಈ ಚಿರತೆ ಬೇಟೆಯಾಡಲು ಬಂದಿತ್ತು. ಇದೇ ರೀತಿ ಬೈಕ್ ನಲ್ಲಿ ತೆರಳುತ್ತಿದ್ದ ನಿಧೀಶ್ ಆಚಾರ್ಯ ಮೇಲು ಚಿರತೆ ಹಾರಿ ಧಾಳಿ ಮಾಡಿದೆ, ಇದಾದ ಬಳಿ ಇನ್ನೋರ್ವ ಬೈಕ್ ಸವಾರ ಸದಾನಂದ ಪುತ್ರನ್ ತಲೆ ಮೇಲೆ ಚಿರತೆ ಹಾರಿದ್ದು, ಹೆಲ್ಮೆಟ್ ಹಾಕಿದ್ದ ಕಾರಣ ಸದಾನಂದ ಪುತ್ರನ್ ಅವರಿಗೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. ಇನ್ನು ಇದೇ ಪರಿಸರದಲ್ಲಿ ಧನಾವೇ ಸುತ್ತಿದ್ದ ಜಯಂತಿ ನಾಯ್ಕ್ ಮತ್ತು ಮಲ್ಲಿಕ ನಾಯ್ಕ್ ಅವರ ಮೇಲು ಎರಗಿರುವ ಚಿರತೆ ಇಬ್ಬರಿಗೂ ಪರಚಿ ಗಾಯ ಮಾಡಿ ಪರಾರಿಯಾಗಿದೆ. ಸದ್ಯ ಚಿರತೆಯ ಸೆರೆ ಹಿಡಿಯಲು ಅರಣ್ಯ ಇಲಾಖೆ, ಬಲೆ ಹಾಗೂ ಬೋನನ್ನು ಇರಿಸಿದ್ದಾರೆ. ಆದರೆ ಸದ್ಯ ಚಿರತೆಯ ದಾಳಿಯಿಂದ ಜನರು ಭಯ ಬಿದ್ದವರಾಗಿದ್ದು ಮಕ್ಕಳು ಶಾಲೆಗೆ ಹೋಗಲು ಕೂಡ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆಯಾಗಿ ಚಿರತೆ ದಾಳಿಯಿಂದ ಕೌಡೂರು ಜನತೆ ಭಯಬೀತರಾಗಿದ್ದು ರಾತ್ರಿ ಸಂಚಾರವನ್ನು ನಿಷೇಧಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಈ ಪುಂಡ ಚಿರತೆಯನ್ನು ಸರಿ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.