ಕುಂದಾಪುರ : ತಹಸಿಲ್ದಾರ್ ಶೋಭಾ ಲಕ್ಷ್ಮಿಯವರ ಮೇಲೆ ಕ್ರಮಕ್ಕೆ ಕಂದಾಯ ಸಚಿವರಿಗೆ ದೂರು ನೀಡಿದ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಸತೀಶ್ ಖಾರ್ವಿ

ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಪಡೆಯಬೇಕಾದ ದಾಖಲೆಗಳನ್ನು ಪಡೆಯದೇ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರರು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಖಾರ್ವಿ ಕುಂದಾಪುರ, ಕಂದಾಯ ಸಚಿವರಾದ ಕೃಷ್ಣೆ ಬೈರೇಗೌಡರಿಗೆ ದೂರು ನೀಡಿದ್ದಾರೆ.

ಕುಂದಾಪುರ ಕಸ್ಟಾ ಗ್ರಾಮದ ಜಯಾನಂದ ಎಂಬುವರು RD 0038651212745 ರಂತೆ ದಿನಾಂಕ 15-09-2020 ರಂದು ಸುಳ್ಳು ಜಾತಿ ಪ್ರಮಾಣ ಪಡಕೊಂಡ ಬಾಬ್ತು ಎಲ್ಲಾ ದಾಖಲೆಗಳೊಂದಿಗೆ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸುವಂತೆ ದೂರು ಸಲ್ಲಿಸಿರುತ್ತೇವೆ. ದೂರಿನ ಅನ್ವಯ ಎದ್ರುದಾರರಾದ ತಹಶೀಲ್ದಾರರು ಪ್ರಕರಣ ಸಂಖ್ಯೆ ICR/CR/03/23-24 ರಂತೆ ಪ್ರಕರಣ ದಾಖಲಿಸಿ ಎಲ್ಲಾ ರೀತಿಯ ಅಂದರೆ ಗ್ರಾಮ ಲೆಕ್ಕಾಧಿಕಾರಿಯವರಿಂದ ಹಿಡಿದು ಕಂದಾಯ ಅಧಿಕಾರಿಯವರಿಂದ ಎಲ್ಲಾ ರೀತಿಯ ವರದಿ ಪಡೆದುಕೊಂಡು ಜಯಾನಂದರವರು ತಂದೆ ಹೆಸರನ್ನು ತಪ್ಪಾಗಿ ನೀಡಿ ದಾಖಲೆಗಳನ್ನು ಪರಿಶೀಲಿಸಿಯೂ ಉದ್ದೇಶ ಪೂರ್ವಕವಾಗಿ ಕಾನೂನನ್ನು ಉಲ್ಲಂಘಿಸಿ ಸಕ್ಷಮ ಪ್ರಾಧಿಕಾರದಲ್ಲಿ ಪ್ರಶ್ನಿಸುವಂತೆ ಆದೇಶಿಸಿರುತ್ತಾರೆ ಹಾಗೂ ಆರೋಪಿ ಜಯಾನಂದರವರ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಊರ್ಜಿತದಲ್ಲಿಸಿರುತ್ತಾರೆ. ಒಂದು ವೇಳೆ ಆರೋಪಿ ಜಯನಂದರವರ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸಲು ಸಮಕ್ಷಮ ಪ್ರಾಧಿಕಾರ ಇವರಲ್ಲಿ ತಹಶೀಲ್ದಾರರೇ ದೂರು ಸಲ್ಲಿಸಿ ರದ್ದುಪಡಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ತಹಶೀಲ್ದಾರರು ವೈಯಕ್ತಿಕವಾಗಿ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಈ ರೀತಿ ಆದೇಶ ಮಾಡಿರುವುದು ಕಂಡು ಬರುತ್ತದೆ. ಮತ್ತು ತಾನೇ ಸರ್ವಾಧಿಕಾರಿ ಎಂದು ಅವರ ಮನಸ್ಸಿನಲ್ಲಿ ಇದ್ದ ಹಾಗೆ ನಮಗೆ ಸಂಶಯವಾಗಿರುತ್ತದೆ.
ಅದೇ ರೀತಿ ಪ್ರಕರಣದಲ್ಲಿ ಆರೋಪಿ ಜಯಾನಂದರವರು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕುಂದಾಪುರದ ಖಾರ್ವಿಕೇರಿ ಪ್ರಾಥಮಿಕ ಶಾಲೆಯಿಂದ ಒಂದು ವರ್ಗಾವಣೆ ಪತ್ರವನ್ನು ಹಾಜರುಪಡಿಸಿದ್ದನ್ನು ನಾನು ಅದರ ಬಗ್ಗೆ ಮುಖ್ಯೋಪಾಧ್ಯಾಯರವರಲ್ಲಿ ಅದರ ಪ್ರತಿಯನ್ನು ಪರಿಶೀಲಿಸುವಬಗ್ಗೆ ವಿಚಾರಿಸಿದಾಗ ಮುಖ್ಯೋಪಾಧ್ಯಾಯರು ಶಾಲಾ ದಾಖಲಾತಿ ರಿಜಿಸ್ಟ್ರಿಯನ್ನು ಪರಿಶೀಲಿಸಿದಾಗ ಪ್ರಮಾಣ ಪತ್ರವು ಕೂಡ ತಿದ್ದಿದ್ದನ್ನು ಕಂಡು ಬಂದಿದ್ದು, ಶಾಲಾ ಮುಖ್ಯೋಪಾಧ್ಯಾಯರು ಜಯಾನಂದರಿಂದ ತಿದ್ದಿದ್ದ ವರ್ಗಾವಣೆ ಪತ್ರವನ್ನು ವಾಪಾಸು ಪಡೆದುಕೊಂಡು ತಿದ್ದಿದ ಬಗ್ಗೆ ತಹಶೀಲ್ದಾರರಿಗೆ ಮುಖ್ಯೋಪಾಧ್ಯಾಯರು ಸ್ಪಷ್ಟಿಕರಣ ನೀಡಿರುತ್ತಾರೆ

. ಶಾಲಾ ಆಡಳಿತ ಮಂಡಳಿಯ (E.O) ರವರ ಪತ್ರವನ್ನು ಮತ್ತು ನಾನು ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಎದ್ರುದಾರರಾದ ತಹಶೀಲ್ದಾರರಾಗಿ ಇನ್ನು ಮುಂದೆ ಮುಂದುವರಿಯಲು ಅನರ್ಹರು ಎಂದು ತಾವು ಮನವರಿಕೆ ಮಾಡಿ , ಹುದ್ದೆಯಿಂದ ವಜಾ ಮಾಡುವರೇ ನಿಮ್ಮಲ್ಲಿ ವಿನಂತಿ. ಮತ್ತು ಈ ಪ್ರಕರಣವು ಸಂಪೂರ್ಣ ಕಾನೂನು ಬಾಹಿರವಾಗಿದ್ದು, ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಪಡೆಯಬೇಕಾದ ದಾಖಲೆಗಳನ್ನು ಪಡೆಯದೇ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರರು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಖಾರ್ವಿ ಕುಂದಾಪುರ, ಕಂದಾಯ ಸಚಿವರಾದ ಕೃಷ್ಣೆ ಬೈರೇಗೌಡರಿಗೆ ದೂರು ನೀಡಿರುತ್ತಾರೆ.

Related Posts

Leave a Reply

Your email address will not be published.