ಮಾಹೆ ಮಣಿಪಾಲ ಮತ್ತು ಟಾಟಾ ಮೆಮೋರಿಯಲ್ ಆಸ್ಪತ್ರೆ ಮುಂಬೈ ನಡುವೆ ಕ್ಯಾನ್ಸರ್ ಜಾಗೃತಿ ಸೌಹಾರ್ದ ಕ್ರಿಕೆಟ್ ಪಂದ್ಯ
ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸಲು ನಾವೆಲ್ಲ ಒಂದಾಗಿ ಹೊರೋಡೋಣ ಎಂಬ ಘೋಷ ವಾಕ್ಯದೊಂದಿಗೆ ಮೇ 15, 2023 ರ ಸೋಮವಾರದಂದು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗವು ಮಾಹೆ ಮಣಿಪಾಲ ಮತ್ತು ಟಾಟಾ ಮೆಮೋರಿಯಲ್ ಆಸ್ಪತ್ರೆ ಮುಂಬೈ ತಂಡಗಳ ಸೌಹಾರ್ದ ಕ್ರಿಕೆಟ್ ಪಂದ್ಯ 14ನೇ ಮೇ ಯಂದು ಏರ್ಪಡಿಸಲಾಗಿತ್ತು. ಮಾಹೆ ಮಣಿಪಾಲದ ವೈದ್ಯರುಗಳ ತಂಡದ ನೇತೃತ್ವವನ್ನು ಮಾಹೆ ಉಪ ಕುಲಪತಿಗಾಳದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ವಹಿಸಿದ್ದರು. ಟಾಟಾ ಮೆಮೋರಿಯಲ್ ಆಸ್ಪತ್ರೆ ಮುಂಬೈ ತಂಡದ ನೇತೃತ್ವವನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆ ಉಪನಿರ್ದೇಶಕರಾದ ಡಾ. ಶೈಲೇಶ್ ವಿ ಶ್ರೀಕಂಡೆ ವಹಿಸಿದ್ದರು. ಕ್ಯಾನ್ಸರ್ ರೋಗದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಮತ್ತು ಈಗ ಕ್ಯಾನ್ಸರ್ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಲಭ್ಯವಿದೆ, ಆದ್ದರಿಂದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.100 ರಷ್ಟು ಗುಣಪಡಿಸಬಹುದು ಎಂಬ ಸಂದೇಶ ನೀಡುವುದಾಗಿತ್ತು.