ಮಂಗಳೂರು: ಬಹುಮಹಡಿ ಕಟ್ಟಡದಿಂದ ಹಾರಿ ಬಿಲ್ಡರ್ ಆತ್ಮಹತ್ಯೆ
ನಗರದ ಬೆಂದೂರ್ ವೆಲ್‌ನಲ್ಲಿರುವ ಅಪಾರ್ಟ್ ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದ ಗುತ್ತಿಗೆದಾರ, ಬಿಲ್ಡರ್ ಮೋಹನ್ ಅಮೀನ್ (೬೫) ಆತ್ಮಹತ್ಯೆಗೈದ ಘಟನೆ ನಡೆದಿದೆ.
ಅವರಿಂದು ಸುಮಾರಿಗೆ ತಾವು ವಾಸವಿದ್ದ14 ಮಹಡಿಯ ಅಪಾರ್ಟ್ ಮೆಂಟ್‌ನ ಟೆರೇಸ್ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮಂಗಳೂರಿನ ವಿವಿಧ ಅಪಾಟ್ಮೆಂಟ್‌ನ್ನು ಮೋಹನ್ ಆಮೀನ್ ನಿರ್ಮಾಣ ಮಾಡಿದ್ದರು. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.