ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್‌ಗಳ ಮಾರಾಟ
ನಗರದ ಕಾರ್ ಸ್ಟ್ರೀಟ್‌ನಲ್ಲಿರುವ ಮನೋಹರ್ ಶೇಠ್ ಮಾಲೀಕತ್ವದ ಅಂಗಡಿ ಮತ್ತು ಉತ್ತರ ಪ್ರದೇಶ ಮೂಲದ ಬೆಚನ್ ಸೋನಾರ್ ಅವರ ಮಾಲೀಕತ್ವದ ಫಳ್ನೀರ್‌ನಲ್ಲಿರುವ ಮತ್ತೊಂದು ಅಂಗಡಿಯಿಂದ ಚಾಕೊಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡ್ರಗ್ಸ್ ಲೇಪಿತ ಚಾಕೊಲೇಟ್‌ಗಳ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್‌ಗಳನ್ನು ‘ಬ್ಯಾಂಗ್’ ಚಾಕೊಲೇಟ್‌ಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಈ ಸಂಬಂಧ ಇಬ್ಬರನ್ನೂ ಬಂಧಿಸಲಾಗಿದ್ದು, ವಶಪಡಿಸಿಕೊಂಡ ಚಾಕೊಲೇಟ್‌ಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.