ಜುಲೈ 31ರಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೌನ, ಪಾರ್ಲಿಮೆಂಟ್‍ಲ್ಲಿ ಅಸಹಕಾರ, ಕೇಂದ್ರ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜುಲೈ 31ರಂದು ನಗರದ ಲಾಲ್‍ಬಾಗ್‍ನ ಗಾಂಧಿಪ್ರತಿಮೆ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಮಣಿಪುರ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷಗಳಿಗೆ ಮಾತನಾಡಲು ನಿರಾಕರಿಸಿದೆ. ಪಿಎಂ ಕೇವಲ 30 ಸೆಕೆಂಡ್ ಉತ್ತರ ನೀಡುತ್ತಾರೆ. ಕ್ರೌರ್ಯದ ಬಗ್ಗೆ ಅವರ ಪ್ರತಿಕ್ರಿಯೆ ಇಲ್ಲ. 35 ಲಕ್ಷದ ಸಣ್ಣ ರಾಜ್ಯದಲ್ಲಿ ರಿಸರ್ವೇಶನ್ ವಿಚಾರದಲ್ಲಿ ಆರಂಭವಾದ ಪ್ರತಿಭಟನೆ ಈ ಮಟ್ಟಕ್ಕೆ ಬಂದಿದೆ. ಮಹಿಳೆಯರಿಗೆ ರಕ್ಷಣೆ ನೀಡುವ ಬಗ್ಗೆ ಕೇಂದ್ರ ಮೌನ ವಹಿಸಿದೆ. 200ಕ್ಕೂ ಅಧಿಕ ಮಂದಿ ಜನ ಸತ್ತರೂ ಕ್ರಮ ಇಲ್ಲ. ಮಣಿಪುರವನ್ನು ಯಾಕೆ ಕಡೆಗಣನೆ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಗಲಭೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಆನಂತರ ಮಾಜಿ ಎಂಎಲ್‍ಸಿ ಐವನ್ ಡಿಸೋಜ ಮಾತನಾಡಿ, ಉಡುಪಿಯಲ್ಲಿ ವಿಡಿಯೊ ಕ್ಯಾಮರಾ ಚಿತ್ರೀಕರಣ ವಿಚಾರ ಎನ್‍ಐಎಗೆ ಕೊಡಿ ಅಂತಾರೆ. ನಮ್ಮ ಪೊಲೀಸ್ರ ಮೇಲೆ ಅವರಿಗೆ ನಂಬಿಕೆ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರ ಇದ್ದರೆ ಮಾತ್ರ ಬಿಜೆಪಿಯವರಿಗೆ ನಂಬಿಕೆ, ಉಳಿದ ಪಕ್ಷ ಇದ್ದರೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸಿದ ಅವರು, ಪರೇಶ್ ಮೇಸ್ತ ಪ್ರಕರಣ ಸಿಬಿಐಗೆ ಕೊಟ್ಟು ಏನು ರಿಸಲ್ಟ್ ಗೊತ್ತಿದೆ. ಈಗ ಬಿಜೆಪಿಯವರೆಲ್ಲ ತನಿಖಾಧಿಕಾರಿಗಳಾಗಿದ್ದಾರೆ. ಈ ಕೇಸ್ ಬಗ್ಗೆ ಫೈಟ್ ಮಾಡಲೂ ನಾಯಕತ್ವ ಇಲ್ಲ. ನಿಮ್ಮ ರಾಜಕೀಯಕ್ಕಾಗಿ ಮಕ್ಕಳ ಭವಿಷ್ಯ ಹಾಳು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಆನಂತರ ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಮಣಿಪುರದಲ್ಲಿ ಜನ ಬದುಕಲು ಅಸಾಧ್ಯವಾಗಿದೆ. ನಾವು ಮಣಿಪುರದ ಜನರ ಜತೆ ಇದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಶ್ರಫ್, ನವೀನ್ ಡಿಸೋಜಾ, ಟಿ.ಕೆ ಸುಧೀರ್, ಶುಭೋದಯ ಅಳ್ವಾ, ಮೊಹಮ್ಮದ್ ಉಪಸ್ಥಿತರಿದ್ದರು.
