ಮಂಗಳೂರು: ಮಂಗಳಾ ಆಸ್ಪತ್ರೆಯಲ್ಲಿ ನ್ಯೂರೊ ಉಪಕರಣ ಉದ್ಘಾಟನೆ

ನರರೋಗ ಮತ್ತು ಕಿವಿಮೂಗು ಗಂಟಲು ರೋಗ ಚಿಕಿತ್ಸೆಗಾಗಿ ಅತ್ಯಂತ ಸುಧಾರಿತ ಮೆಡ್ ಟ್ರೋನಿಕ್ ಸ್ಟೆಲ್ತ್ ಎಸ್-ನಿರ್ಮಿತ ನ್ಯೂರೊ ಇಎನ್‌ಟಿ ನ್ಯಾವಿಗೇಶನ್ ಸಿಸ್ಟಂ ಉಪಕರಣವನ್ನು ನಗರದ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ಉದ್ಘಾಟಿಸಲಾಯಿತು.

 ಖ್ಯಾತ ವೈದ್ಯರಾದ ಡಾ. ರಾಜ, ಡಾ. ಶಂಕರ್ ಅತ್ಯಾಧುನಿಕ ಉಪಕರಣವನ್ನು ಲೋಕಾರ್ಪಣೆಗೊಳಿಸಿದರು. ಸಂದರ್ಭದಲ್ಲಿ ಮಾತನಾಡಿದ ಮಂಗಳ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್‌ನಿರ್ದೇಶಕರ ಡಾ. ಗಣಪತಿ ಪಿ ಅವರು ಮಾನವನ ದೇಹದ ಮೇಲೆ ಅತ್ಯಂತ ಸವಾಲಿನ ಚಿಕಿತ್ಸೆಗಳಲ್ಲಿ ಮೆದುಳಿನ ಚಿಕಿತ್ಸೆಯು ತುಂಬಾ ಕ್ಲಿಷ್ಟಕರ. ಸುರಕ್ಷಿತ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಆಪರೇಟಿಂಗ್ ಮೈಕ್ರೋಸ್ಕೋಪ್ ನ್ಯೂರೊ ಎಂಡೋಸ್ಕೋಪ್ ಮತ್ತಿತರ ಉಪಕರಣಗಳು ಅವಶ್ಯಕ. ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ನ್ಯೂರೊ ಸರ್ಜರಿಯಲ್ಲಿ ಬಳಸಲು ಪ್ರಾರಂಭಿಸಿರುವ ಉಪಕರಣವೇ ನ್ಯೂರೊ ನ್ಯಾವಿಗೇಶನ್ ಸಿಸ್ಟಂ. ಶಸ್ತ್ರಚಿಕಿತ್ಸೆಯಲ್ಲಿ ನಿಖರ ಮಾರ್ಗದರ್ಶನಕ್ಕಾಗಿ ಇದನ್ನು ಬಳಸಲಾಗುತ್ತದೆ ಎಂದು ಹೇಳಿದರು.

ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಡಾ. ದೀಪಕ್ ಉಪಕರಣದ ಬಗ್ಗೆ ಮಾಹಿತಿ ನೀಡುತ್ತಾ, ಶಸ್ತ್ರಚಿಕಿತ್ಸೆಯ ಮೊದಲೇ ಮೆದುಳಿನ ಒಳಭಾಗದ ಮಾಹಿತಿಯನ್ನು ಉಪಕರಣದ ಮೂಲಕ ಪಡೆದು ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ ಮತ್ತು ಮುಖ್ಯವಾಗಿ ಕೀ ಹೋಲ್ ಮೂಲಕ ಗಡ್ಡೆಯನ್ನು ತೆಗೆಯಲು ಬಹಳ ಉಪಯುಕ್ತವಾಗಿದೆ ಎಂದರು.

ಆನಂತರ ಡಾ. ಗೌತಮ್ ಅವರು ಮಾಹಿತಿ ನೀಡಿ, ಮೆದುಳು ದ್ರವ ಸೋರಿಕೆ ಪಿಟ್ಯುಟರಿ ಗಡ್ಡೆಗಳು, ಕಣ್ಣಿನ ಸಾಕೆಟ್‌ಗಳು, ಕಪ್ಪು ಶಿಲಿಂದ್ರಗಳಂತಹ, ಸೈನಸ್ ಸೋಂಕುಗಳಂತಹ ಹಲವಾರು ರೋಗಗಳನ್ನು ಮೂಗಿನ ಮೂಲಕ ಮಾಡುವ ಚಿಕಿತ್ಸೆಯನ್ನು ಉಪಕರಣದ ನೆರವಿನಿಂದ ಬಹಳ ಸುಲಭದಲ್ಲಿ ನೆರವೇರಿಸಬಹುದು ಅಲ್ಲದೆ ಲ್ಯಾಟರಲ್ ಸೆಲ್ ಬೇಸ್ ಎಂದು ಕರೆಯಲಾಗುವ ಕಿವಿಯ ಗಡ್ಡೆಗಳನ್ನು ಸುರಕ್ಷಿತವಾಗಿ ಪರಿಹರಿಸಬಹುದು ಎಂದು ಹೇಳಿದರು.

ಸಂದರ್ಭ ಸುದ್ದಿಗೋಷ್ಟಿಯಲ್ಲಿ ಮಂಗಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗಣಪತಿ ಸಿ, ಆಡಳಿತ ನಿರ್ದೇಶಕಿ ಡಾ. ಅನಿತಾ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.