ಮಂಗಳೂರು ವಿವಿ: ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಸಾಧನೆ

ಮಂಗಳೂರು: ಪಂಜಾಬ್‌ಕೃಷಿ ವಿಶ್ವವಿದ್ಯಾಲಯ, ಲುಧಿಯಾನ, ಇಲ್ಲಿ ನಡೆದ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಭಾಗವಹಿಸಿ ಏಕಾಂಕ ನಾಟಕದಲ್ಲಿ ದ್ವಿತೀಯ ಸ್ಥಾನ, ಪ್ರಹಸನ (Skit) ದಲ್ಲಿ ತೃತೀಯ ಸ್ಥಾನ, ಜಾನಪದ ವಾದ್ಯ ವೃಂದದಲ್ಲಿ ದ್ವಿತೀಯ ಸ್ಥಾನ, ಶಾಸ್ತ್ರೀಯ ಕೊಳಲು ವಾದ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್.‌ಧರ್ಮ ಹಾಗೂ ಕುಲಸಚಿವ ರಾಜು ಮೊಗವೀರ ಕೆ.ಎ.ಎಸ್ ಇವರು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published.