ಬೆಳಗಾವಿ: ಅಯ್ಯಪ್ಪ ದೇವರ ಸನ್ನಿಧಾನದತ್ತ ಹೆಜ್ಜೆ ಹಾಕಿದ ಶ್ವಾನ..!!
ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪಾದಯಾತ್ರೆಯಲ್ಲಿ ಶ್ವಾನವೊಂದು ಅಯ್ಯಪ್ಪ ದೇವರ ಸನ್ನಿಧಾನದತ್ತ ಹೆಜ್ಜೆ ಹಾಕ್ತಿದೆ.ದಿನ ಪ್ರತಿ ಸುಮಾರು 40 ಕಿಮೀ ನಡೆಯುತ್ತಿರುವ ಶ್ವಾನವನ್ನು ಕಂಡು ಎಲ್ಲಾರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೇಕ್ಕೇರಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳ ತಂಡ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ನವೆಂಬರ್ 4ರಂದು ಪಾದಯಾತ್ರೆ ಶುರುಮಾಡಿದ್ರು. ಗೋಕಾಕ್ ತಾಲೂಕಿನ ಗ್ರಾಮದಿಂದ ಶ್ವಾನವೊಂದು ಅಯ್ಯಪ್ಪ ಮಾಲಾಧಾರಿಗಳ ಜೊತೆಗಿದ್ದು ಸುಮಾರು 600 ಕಿಮೀ ಕ್ರಮಿಸಿದೆ.
ಹತ್ತು ಮಂದಿ ಮಾಲಾಧಾರಿಗಳ ತಂಡ ಮಂಗಳೂರು ಮೂಲಕ ಕೇರಳ ರಾಜ್ಯದ ಕಾಸರಗೋಡಿಗೆ ತಲುಪಿದ್ದಾರೆ.ಗುರು ಸ್ವಾಮಿಗಳು ಶ್ವಾನವನ್ನು ಓಡಿಸಿದ್ರು ಕೂಡಾ ಅದು ಹೋಗಲಿಲ್ಲ, ನಮ್ಮ ಜೊತೆಗೆ ಬಂದಿದೆ. ನಾವು ನೀಡುತ್ತಿರುವ ಆಹಾರವನ್ನು ಮಾತ್ರ ಸೇವಿಸುತ್ತೆ, ನಮ್ಮ ಜೊತೆಗೆ ಪಾದಯಾತ್ರೆ ಶುರುಮಾಡುತ್ತೆ, ನಾವು ಎಲ್ಲೆ ವಾಸ್ತವ್ಯ ಮಾಡ್ತೆವಾ ಅಲ್ಲೆ ಅದು ಕೂಡ ಇರುತ್ತೆ ಎನ್ನುತ್ತಾರೆ ಅಯ್ಯಪ್ಪ ಮಾಲಾಧಾರಿ ಮೌನೇಶ್ ರಾಚಪ್ಪ ಬಡಿಗೇರ್. ಈಗಾಗಲೇ 14 ದಿನಗಳ ಪಾದಯಾತ್ರೆ ಮುಗಿಸಿರುವ ಇವರು ಇನ್ನೂ 500 ಕಿಮೀ ಪಾದಯಾತ್ರೆ ಮೂಲಕ ಡಿಸೆಂಬರ್ 4 ಅಥವಾ 5 ರಂದು ದೇವರ ಸನ್ನಿಧಾನ ತಲುಪಲಿದ್ದಾರೆ.