ಮೂಡುಬಿದಿರೆ: ಡಿ.14ರಿಂದ 17ರವರೆಗೆ ಆಳ್ವಾಸ್ ವಿರಾಸತ್ ನಲ್ಲಿ ಆಹಾರೋತ್ಸವ, ಕೃಷಿ-ಕರಕುಶಲ ವಸ್ತು ಪ್ರದರ್ಶನ

ಮೂಡುಬಿದಿರೆ: ಡಿ.14ರಿಂದ 17ರವರೆಗೆ ಆಳ್ವಾಸ್ ವಿರಾಸತ್ ನಲ್ಲಿ ಆಹಾರೋತ್ಸವ, ಕೃಷಿ-ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮಹಾಮೇಳ-2023

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುವ ಆಳ್ವಾಸ್ ವಿರಾಸತ್ ಸಂದರ್ಭದಲ್ಲಿ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರ ಸ್ಮರಣಾರ್ಥ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಡಿಸೆಂಬರ್ 14ರಿಂದ 17ರವರೆಗೆ ಬೆಳಿಗ್ಗೆ 09ರಿಂದ ರಾತ್ರಿ 9ರವರೆಗೆ `ಆಳ್ವಾಸ್ ಆಹಾರೋತ್ಸವ, ಕೃಷಿ- ಕರಕುಶಲ ವಸ್ತುಗಳ ಮಹಾಮೇಳ’ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದರು.

ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕೃಷಿಗೆ ಸಂಬಂಧಿಸಿದ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಹೂವು ಬೀಜಗಳ ಮಾರಾಟ, ನರ್ಸರಿಗಳು, ಸಾವಯವ-ರಾಸಾಯನಿಕ ಗೊಬ್ಬರಗಳು, ನೀರು-ನೆಲಗಳಲ್ಲಿ ಬೆಳೆಯುವ ವೈವಿಧ್ಯಮಯ ಹೂಗಿಡಗಳು, ಕೃಷಿ ಉಪಕರಣ-ಯಂತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕರಕುಶಲ ವಸ್ತುಗಳಾದಂತಹ ಸೆರಾಮಿಕ್ಸ್ ಮತ್ತು ಗಾಜಿನ ವಸ್ತುಗಳು, ಫೈಬರ್ ಮತ್ತು ಜವಳಿ ಕರಕುಶಲ ವಸ್ತುಗಳು, ಹೂವಿನ ಕರಕುಶಲ ವಸ್ತುಗಳು, ಚರ್ಮದ ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಹಾಮೇಳದ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಜಿನೇಂದ್ರ ಜೈನ್, ಉದಯ ದೇವಾಡಿಗ, ಗುಣಪಾಲ ಮುದ್ಯ ಹಾಗೂ ಡಾ. ಶಶಿಕುಮಾರ ಉಪಸ್ಥಿತರಿದ್ದರು.

Related Posts

Leave a Reply

Your email address will not be published.