ಸುರತ್ಕಲ್: ಕಳೆದು ಹೋಗಿದ್ದ ಮೊಬೈಲ್ ವಾರಸುದಾರರಿಗೆ ಹಸ್ತಾಂತರ
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ಮೊಬೈಲ್ ಫೋನೊಂದು ಕಳೆದು ಹೋಗಿದ್ದು, ವಾರಸುದಾರರಿಗೆ ಮರಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುರತ್ಕಲ್‍ನ ಕುಳಾಯಿ ನಿವಾಸಿ ವಿ4 ನ್ಯೂಸ್‍ನ ಕ್ಯಾಮರಾಮೆನ್ ಶರತ್ ಸಾಲ್ಯಾನ್ ಅವರ ಪುತ್ರಿ ಶಿವಾನಿಯವರ ಮೊಬೈಲ್ ಪೋನ್ ಖಾಸಗಿ ಬಸ್‍ನಲ್ಲಿ ಕಳೆದು ಹೋಗಿತ್ತು.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಪ್ರವೃತ್ತರಾದ ಪೊಲೀಸರು ಸಿಇಐಆರ್ ಪೋರ್ಟಲ್ ಆ್ಯಪ್ ಮೂಲಕ ಪತ್ತೆ ಹಚ್ಚಿದ್ದಾರೆ. ಇಂದು ಸುರತ್ಕಲ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಮಹೇಶ್ ಅವರು ಕಳೆದು ಹೋದ ಮೊಬೈಲನ್ನು ವಾಪಸ್ಸು ನೀಡಿದ್ದಾರೆ. ಸುರತ್ಕಲ್ ಪೊಲೀಸರ ಕಾರ್ಯಕ್ಕೆ ಪ್ರಶಸಂಸೆ ವ್ಯಕ್ತವಾಗಿದೆ