ಹೊಂಡ-ಗುಂಡಿಗಳ, ಅನಧಿಕೃತ ಅಗೆತಗಳ ಫೋಟೊ ತೆಗೆದು ಕಳುಹಿಸಿ: ಮಂಗಳೂರು ಮಹಾನಗರ ಪಾಲಿಕೆ

ಮಂಗಳೂರು : ಹೊಂಡ-ಗುಂಡಿಗಳ ಹಾಗೂ ಅನಧಿಕೃತ ಅಗೆತಗಳ ಬಗ್ಗೆ ದೂರುಗಳಿದ್ದಲ್ಲಿ  WhatsApp ಸಂಖ್ಯೆ 9449007722 ಹಾಗೂ ಮಹಾನಗರಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306ಗೆ ತಿಳಿಸಬಹುದಾಗಿದೆ ಎಂದು ಮನಪಾ ಪ್ರಕಟನೆ ತಿಳಿಸಿದೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2022ರ ಮಳೆಗಾಲದಲ್ಲಿ ಜೂನ್ ಹಾಗೂ ಜುಲೈ ಮಾಹೆಯಲ್ಲಿ ಸಾಮಾನ್ಯ ಮಳೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುತ್ತದೆ. ಭಾರೀ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಉಂಟಾಗುವ ಹೊಂಡ-ಗುಂಡಿಗಳನ್ನು ಕಾಲಕಾಲಕ್ಕೆ ಶೀಘ್ರ ದುರಸ್ಥಿಗೆ ಕ್ರಮ ವಹಿಸಲಾಗುತ್ತಿರುತ್ತದೆ. ಅಲ್ಲದೆ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 24X7 ನೀರು ಸರಬರಾಜು ಯೋಜನೆಯ ಕಾಮಗಾರಿಗಳು, ಗೈಲ್ ಗ್ಯಾಸ್ ಕಂಪೆನಿಯಿಂದ ಗ್ಯಾಸ್ ಲೈನ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿರುತ್ತದೆ. ಈ ಕಾಮಗಾರಿಗಳ ಭಾಗದ ರಸ್ತೆಗಳ ಮರು ನಿರ್ಮಾಣವನ್ನು ಸಂಬಂಧಿಸಿದ ಇಲಾಖೆಯವರು ಕಾಲಕಾಲಕ್ಕೆ ನಿರ್ವಹಿಸುತ್ತಿರುತ್ತಾರೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳು, ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹಾದು ಹೋಗಿರುತ್ತದೆ ಹಾಗೂ ಈ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಬಗ್ಗೆ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಸಂಬಂಧಿಸಿದ ಇಲಾಖೆಯವರಿಗೆ ಈ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿರುತ್ತದೆ.

ಹೊಂಡ-ಗುಂಡಿಗಳ ಹಾಗೂ ಅನಧಿಕೃತ ಅಗೆತಗಳ ಬಗ್ಗೆ ದೂರುಗಳಿದ್ದಲ್ಲಿ ವ್ಯಾಟ್ಸ್ ಆಪ್ ಸಂಖ್ಯೆ 9449007722 ಹಾಗೂ ಮಹಾನಗರಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306ಗೆ ತಿಳಿಸಬಹುದಾಗಿದೆ. ಅಲ್ಲದೆ ವಾರ್ಡ್ ಹಂತದಲ್ಲಿ ಸಂಬಂಧಪಟ್ಟ ವಾರ್ಡ್ ಇಂಜಿನಿಯರ್‌ಗಳನ್ನು ಸಂಪರ್ಕಿಸಬಹುದಾಗಿದೆ. ಮೇಲಿನ ವಿಷಯವನ್ನು ಸಾರ್ವಜನಿಕರು ಮನಗಂಡು ಮಹಾನಗರಪಾಲಿಕೆಯೊಂದಿಗೆ ಸಹಕರಿಸಲು ಕೋರಿದೆ ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Related Posts

Leave a Reply

Your email address will not be published.