ಉಳ್ಳಾಲ : ಲಿಟಲ್ ಹಾರ್ಟ್ ಕಿಂಡರ್ ಗಾರ್ಟನ್ ಸಂಸ್ಥೆಯ ಮಾಲಕಿ ಹರಿಣಾಕ್ಷಿ ಮೃತದೇಹ ಪತ್ತೆ

ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ಲಿಟಲ್ ಹಾರ್ಟ್ ಕಿಂಡರ್ ಗಾರ್ಟನ್ ಸಂಸ್ಥೆಯ ಮಾಲಕಿ ಹಾಗೂ ಶಿಕ್ಷಕಿ ಹರಿಣಾಕ್ಷಿ ಎಂಬವರ ( 50)
ಮೃತದೇಹ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

ಬೆಳಿಗ್ಗೆ ನಾಪತ್ತೆಯಾಗಿದ್ದ ಹರಿಣಾಕ್ಷಿ ಅವರನ್ನು ಇಬ್ಬರು ಪುತ್ರರು ಮನೆ ಸಮೀಪವಿಡೀ ಹುಡುಕಾಡಿ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸರು ಹುಡುಕಾಟ ನಡೆಸಿದಾಗ ಮಧ್ಯಾಹ್ನ ವೇಳೆ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಳಿ ಚಪ್ಪಲಿಗಳು ಪತ್ತೆಯಾಗಿತ್ತು. ಬಾವಿಯಲ್ಲಿ ಮೃತದೇಹ ಪತ್ತೆಯಾಗದೇ ಇದ್ದಾಗ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜುಗಾರರ ಮೂಲಕ ಹುಡುಕಾಟ ನಡೆಸಲಾಯಿತು. ಇದೇ ವೇಳೆ ಬಾವಿಯಲ್ಲಿ ಹರಿಣಾಕ್ಷಿ ಮೃತದೇಹ ಪತ್ತೆಯಾಗಿದೆ. ಹರಿಣಾಕ್ಷಿ ಅವರು ಕೆಲದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಮನೆಯಲ್ಲೇ ನರ್ಸರಿ, ಯುಕೆಜಿ ಹಾಗೂ ಟ್ಯೂಷನ್ ತರಗತಿ ಹೊಂದಿದ್ದರು. ಮೃತರ ಪತಿ ಬಸವರಾಜ್ ಶಿವಮೊಗ್ಗದಲ್ಲಿ ನ್ಯಾಯವಾದಿಯಾಗಿದ್ದಾರೆ. ಇಬ್ಬರು ಪುತ್ರರಲ್ಲಿ ಓರ್ವ ಇನ್ಫೋಸಿಸ್ ಉದ್ಯೋಗಿ ಹಾಗೂ ಇನ್ನೋರ್ವ ಪದವಿ ವಿದ್ಯಾರ್ಥಿ ಯಾಗಿದ್ದಾನೆ. ಕೊರೊನಾ ಲಾಕ್ಡೌನ್ ಸಂದರ್ಭ ಅಸಹಾಯಕರಿಗೆ ಆಹಾರ ಕಿಟ್ ಒದಗಿಸಿದ್ದರು.

Related Posts

Leave a Reply

Your email address will not be published.