ಮಂಗಳೂರು: ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕೇಶದಾನ ಮಾಡಿ ಮೆಚ್ಚುಗೆಗೆ ಪಾತ್ರರಾದ ಚಿನ್ನು ಕೊಟ್ಟಾರಿ

ತುಳುನಾಡ ಭಾರ್ಗವ ಎಂದು ಬಿರುದು ಪಡೆದ ಚಿನ್ನು ಕೊಟ್ಟಾರಿಯವರು ತುಳು ಚಿತ್ರರಂಗ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಹೆಸರುವಾಸಿಯಾಗಿದ್ದು, ತನ್ನದೇ ಆದ ವಿಶಿಷ್ಟ ಕೇಶವಿನ್ಯಾಸದಿಂದ ಗುರುತಿಸಲ್ಪಟ್ಟಿದ್ದ ಚಿನ್ನು ಕೊಟ್ಟಾರಿ ಅವರು, 2018 ಮಿಸ್ಟರ್ ಬಿಯಾರ್ಡ್ ಟೈಟಲ್‍ನ್ನು ಮುಡಿಗೇರಿಸಿಕೊಂಡಿದ್ದರು. ಸರಿಸುಮಾರು 10 ವರ್ಷಗಳಿಂದ ತಾನು ಬಿಟ್ಟ ಕೇಶವನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ವಿಶ್ವಹಿಂದೂ ಪರಿಷತ್ ಮುಖಾಂತರ ಕೇಶದಾನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
