ಮಂಗಳೂರು: ಮಾಂಡವಿ ಮೋಟಾರ್ಸ್ ನೆಕ್ಸಾ || ಮುದ್ದು ಕೃಷ್ಣ ಆನ್‍ಲೈನ್ ಫೋಟೋ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ
ಮಂಗಳೂರಿನ ಏಪೋರ್ಟ್ ರಸ್ತೆಯಲ್ಲಿರುವ ಮಾಂಡವಿ ಮೋಟಾರ್ಸ್ ನೆಕ್ಸಾ ಕಾರು ಶೋರೂಂ ವತಿಯಿಂದ ಮುದ್ದು ಕೃಷ್ಣ ಆನ್‍ಲೈನ್ ಫೋಟೋ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರು ಮಾರಾಟ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ತನ್ನದೇ ಆದ ಚಾಪು ಮೂಡಿಸಿರುವ ನಗರದ ಏರ್ಪೋರ್ಟ್ ರಸ್ತೆಯಲ್ಲಿರುವ ನೆಕ್ಸಾ ಕಾರು ಶೋರೂಂನಲ್ಲಿ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮುದ್ದು ಕೃಷ್ಣ ಆನ್‍ಲೈನ್ ಫೋಟೋ ಸ್ಪರ್ಧೆಯನ್ನು ಆಯೋಜಿಸಿದ್ದರು.
ಸ್ಪೇರ್ಸ್ & ಸರ್ವೀಸ್‍ನ ಅಸೋಸಿಯೇಟ್ ವಯ್ಸ್ ಪ್ರೆಸಿಡೆಂಟ್ ಪಾಶ್ವನಾಥ್ ಜೈನ್ ಮಾತನಾಡಿ, ಏರ್ಪೋರ್ಟ್ ರಸ್ತೆಯಲ್ಲಿರುವ ನೆಕ್ಸಾ ಕಾರು ಶೋರೂಂನ ವತಿಯಿಂದ ಮುದ್ದುಕೃಷ್ಣ ಸ್ಪರ್ಧೆಯನ್ನು ಆಯೋಜಿಸಿದ್ದು 190 ಮಂದಿ ಸ್ಪರ್ಧಿಸಿದ್ದಾರೆ. ಅದರಲ್ಲಿ ಒಂದರಿಂದ ಎರಡು ವರ್ಷದೊಳಗಿನ ಮಕ್ಕಳೇ ಅತೀ ಹೆಚ್ಚು ಪಾಲ್ಗೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಪುಟಾಣಿ ಮಕ್ಕಳಿಗೆ ಶುಭವಾಗಲಿ ಎಂದು ಹಾರೈಸಿದರು.
ಸೇಲ್ಸ್‍ನ ಸಹಾಯಕ ಜನರಲ್ ಮ್ಯಾನೇಜರ್ ಅಕ್ಷಯ್ ಜೈನ್ ಅವರು ಮಾತನಾಡಿ, ಈ ಸ್ಪರ್ಧೆಯನ್ನು ಆರಂಭ ಮಾಡಿದ್ದಾಗಿನಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇಂತಹ ಸ್ಪರ್ಧೆಗಳ ಆಯೋಜನೆಯೊಂದಿಗೆ ಗ್ರಾಹಕರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ ಎಂದರು.
ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಇಶಾನ್ ವಿ ಪೂಜಾರಿ, ದ್ವಿತೀಯ ಬಹುಮಾನ ಚಾರ್ವಿಕ್ ಕೆ. ಪೂಜಾರಿ, ತೃತೀಯ ಬಹುಮಾನವನ್ನು ವಿಖ್ಯಾತ್ ಕಾಮತ್ ಪಡೆದುಕೊಂಡರು. ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೆ ಸರ್ಟಿಫಿಕೆಟ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೆಕ್ಸಾದ ಹೆಚ್.ಆರ್. ಶಿವಪ್ರಸಾದ್, ನೆಕ್ಸಾ ಸೇಲ್ಸ್‍ನ ಶೋರೂಂ ಮ್ಯಾನೇಜರ್ ಮೀನಾ ರೇಗೋ, ಮಾಂಡವೀ ಮೋಟಾರ್ಸ್‍ನ ಸಹಾಯಕ ಸೇಲ್ಸ್ ಮ್ಯಾನೇಜರ್ ಮುರಳೀಧರ ಉಪಸ್ಥಿತರಿದ್ದರು.