ಲಾರಿ ಮಾಲಕರು – ಟ್ರಾನ್ಸ್‌ಪೋರ್ಟರ್ಸ್ ನಡುವೆ ಸಂಧಾನ ವಿಫಲ : ಸೆ.29 ರಿಂದ ಲಾರಿ ಮುಷ್ಕರ
ಮಂಗಳೂರು : ಇಲ್ಲಿನ ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ಸೆ.27 ರಂದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಲಾರಿ ಮಾಲಕರು ಹಾಗೂ ಟ್ರಾನ್ಸ್‌ಪೋರ್ಟರ್ಸ್ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಸೆ.29 ರ ಶುಕ್ರವಾರದಿಂದ ಲಾರಿ ಮುಷ್ಕರ ನಡೆಯಲಿದೆ.
ಸಭೆಯ ಬಳಿಕ ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಮಾತನಾಡಿ ‘ಲಾರಿ ಮಾಲಕರ ಬೇಡಿಕೆಯಂತೆ ಬಾಡಿಗೆಯನ್ನು ಏರಿಸಲಾಗಿಲ್ಲ. ಈಗಿರುವ ಕನಿಷ್ಟ ಬಾಡಿಗೆ ದರದ ಮೇಲೆ ಟನ್ ಗೆ 100 ರೂ. ಏರಿಕೆ ಸಾಕಾಗದು, ಹೀಗಾಗಿ ಬೇಡಿಕೆ ಈಡೇರುವ ತನಕ ಮುಷ್ಕರ ಮುಂದುವರಿಯುತ್ತದೆ’ ಎಂದರು.
‘ರಾಜ್ಯದ ಪ್ರತಿ ಜಿಲ್ಲೆಯ ಲಾರಿ ಯೂನಿಯನ್ ಸದಸ್ಯರು ನಮ್ಮ ಮುಷ್ಕರಕ್ಕೆ ಬೆಂಬಲವಾಗಿ ತಮ್ಮ ಲಾರಿಗಳನ್ನು ಕಲ್ಲಿದ್ದಲು ಲೋಡಿಂಗ್ ಕಳುಹಿಸದೆ ನಮಗೆ ಬೆಂಬಲ ನೀಡುತ್ತಿದ್ದಾರೆ’ ಎಂದರು.