ಮಂಗಳೂರು: ‘ಕರ್ನಾಟಕಕ್ಕೆ 50ರ ಸಂಭ್ರಮ’: ಶೃಂಗಾರಗೊಂಡ ಮಂಗಳೂರು ಪಾಲಿಕೆ ಆವರಣ
ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೈವಿಧ್ಯಮಯವಾಗಿ ನಾಡಹಬ್ಬ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಇದರಂತೆ ಮಂಗಳೂರು ಮಹಾನಗರ ಪಾಲಿಕೆ ಆವರಣ ಕನ್ನಡ ಬಾವುಟದ ಮುಖಾಂತರ ಶೃಂಗಾರಗೊಂಡಿದೆ.
ಮಂಗಳೂರು ಪಾಲಿಕೆ ಕಚೇರಿಯ ಮುಖ್ಯ ಪ್ರವೇಶ ದ್ವಾರವನ್ನು ಕನ್ನಡ ಬಾವುಟದಿಂದಲೇ ವಿಶೇಷವಾಗಿ ಅಲಂಕರಿಸಲಾಗಿದೆ. ಪಾಲಿಕೆ ಕಚೇರಿ ಮುಂಭಾಗ ಕನ್ನಡ ಬಾವುಟದ ಸ್ವಾಗತ ಕಮಾನುಗಳು, ಶುಭಾಯ ಕೋರಿ ಹಾಕಿದ ನಾಮಫಲಕ, ನಾಡು ನುಡಿ ಸಂಸ್ಕøತಿಯನ್ನು ಸಾರುವ ಕಂಬಳದ ಕೋಣಗಳು, ಹಂಪಿಯ ಚಿತ್ರಣ ನೋಡುಗರನ್ನು ಆಕರ್ಷಿಸುತ್ತಿದೆ.