ಮಂಗಳೂರಿನಲ್ಲಿ ದಸರಾ ನೈಟ್ ಮ್ಯಾರಥಾನ್ ಸ್ಪರ್ಧೆ
ಮಂಗಳೂರು ದಸರಾ ಮಹೋತ್ಸವ ಪ್ರಯುಕ್ತ ಝೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ಕುದ್ರೋಳಿ ಕ್ಷೇತ್ರದ ಸಹಯೋಗದಲ್ಲಿ ಆಯೋಜಿಸಲಾದ ನೈಟ್ ಮ್ಯಾರಥಾನ್ ಸ್ಪರ್ಧೆ ನಡೆಯಿತು.
ಸ್ಪರ್ಧೆಗೆ ಸಹಾಯಕ ಪೊಲೀಸ್ ಆಯುಕ್ತರಾದ ಮಹೇಶ್ ಕುಮಾರ್ ಅವರು ಚಾಲನೆ ನೀಡಿದರು. ಕುದ್ರೋಳಿ ಕ್ಷೇತ್ರ ದ ಪ್ರಧಾನ ದ್ವಾರದಿಂದ ಮಣ್ಣಗುಡ್ಡ, ನಾರಾಯಣಗುರು ಸರ್ಕಲ್, ಎಂ.ಜಿ. ರಸ್ತೆ, ಪಿವಿಎಸ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ಕ್ಲಾಕ್ ಟವರ್, ಅಳಕೆ ಯಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸುವ ಮೂಲಕ 7 ಕಿ.ಮೀ. ಸಾಗಿತು.ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು.