ಕೋಸ್ಟ್ ಗಾರ್ಡ್‍ನ ಸಂಸ್ಥಾಪನಾ ದಿನಾಚರಣೆ, ಸಮುದ್ರದಲ್ಲಿ ನಡೆದ ಅಣುಕು ಕಾರ್ಯಾಚರಣೆ
ಸಮುದ್ರ ಮಾರ್ಗವಾಗಿ ನುಸುಳಲು ಯತ್ನಿಸಿದ ಶತ್ರು ದೇಶದ ನುಸುಳುಕೋರರನ್ನು ಹಿಮ್ಮೆಟ್ಟಿಸಲಾಯಿತು. ನೀರಲ್ಲಿದ್ದವರಿಗೂ ಮಿಷನ್ ಗನ್ ನಲ್ಲಿ ಫಯರ್ ಮಾಡೋ ಮೂಲಕ ಓಡಿಸಲಾಯಿತು. ಬೆಂಕಿ ಹತ್ತಿಕೊಂಡ ಸೇನಾ ಬೋಟ್‍ಗೆ ತಕ್ಷಣ ನೀರು ಹಾಯಿಸಿ ನಂದಿಸಲಾಯಿತು. ಈ ವೇಳೆ ಸಮುದ್ರಕ್ಕೆ ಬಿದ್ದ ಸೇನಾನಿಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಯಿತು.ಇದೆಲ್ಲಾ ನಮ್ಮ ಕರಾವಳಿಯ ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ನಡೆದ ಕಾರ್ಯಾಚರಣೆ.ಹಾಗಾದ್ರೆ ಅಲ್ಲಿ ಏನಾಯ್ತು ಅನ್ನೋ ಡಿಟೈಲ್ ಸ್ಟೋರಿ ಇಲ್ಲಿದೆ.
ಸಮುದ್ರದ ಮಧ್ಯೆ ನಡೆಯುತ್ತಿರುವ ಫೈರಿಂಗ್, ರೆಸ್ಕ್ಯೂ, ಆತಂಕದಲ್ಲಿ ನೀರಿಗೆ ತಾಗಿಕೊಂಡೇ ಹೋಗೋ ಹೆಲಿಕಾಪ್ಟರ್ ಇದನ್ನೆಲ್ಲ ನೋಡುವಾಗ ಏನೋ ತೊಂದರೆಯಾಗಿದೆ ಅನ್ನಿಸುತ್ತೆ.ಆದ್ರೆ ಇದೊಂದು ಅಣಕು ಕಾರ್ಯಾಚರಣೆ.ಇಂಡಿಯನ್ ಕೋಸ್ಟ್ ಗಾರ್ಡ್ ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ಕೋಸ್ಟ್ ಗಾರ್ಡ್ ಪಣಂಬೂರು ಸಮೀಪದ ಅರಬ್ಬೀ ಸಮುದ್ರದಲ್ಲಿ ಆಯೋಜಿಸಿ ಅಣಕು ಕಾರ್ಯಾಚರಣೆ.ನಮ್ಮ ಜಲಸೇನೆ ಸಮುದ್ರದಲ್ಲಿ ಏನು ಮಾಡುತ್ತಿರುತ್ತೆ ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ.ಅದರಲ್ಲೂ ಕೋಸ್ಟ್ ಗಾರ್ಡ್ ನಲ್ಲಿ ಸೇವೆ ಸಲ್ಲಿಸುವ ಸೇನಾನಿಗಳ ಕುಟುಂಬಿಕರು ಈ ಬಗ್ಗೆ ತಿಳಿದುಕೊಳ್ಳಬೇಕೆಂದು ಅವರನ್ನೂ ಸಮುದ್ರ ಮಧ್ಯೆ ಕರೆತರಲಾಗಿತ್ತು.ಕೋಸ್ಟ್ ಗಾರ್ಡ್ ನ ಸಿಬ್ಬಂದಿಗಳ ಕಾರ್ಯಾಚರಣೆ ನೋಡಿ ಸ್ವತಃ ಅವರ ಕುಟುಂಬಿಕರೇ ನಿಟ್ಟುಸಿರು ಬಿಟ್ಟಿದ್ದಾರೆ.
ಸಮುದ್ರ ಮಾರ್ಗವಾಗಿ ದೇಶ ನುಸುಳುವವರನ್ನು ಹೇಗೆ ಹಿಮ್ಮೆಟ್ಟಿಸುತ್ತಾರೆ ಅನ್ನೋದನ್ನೂ ಇಲ್ಲಿ ತೋರಿಸಲಾಯಿತು.ಕೋಸ್ಟ್ ಗಾರ್ಡ್ ನ ಮೂರು ಶಿಫ್ ಗಳು ನುಸುಳು ಕೋರರನ್ನು ಸುತ್ತುವರಿದು ಶಿಫ್ ನಲ್ಲಿದ್ದ ಮೆಷಿನ್ ಗನ್ ಮೂಲಕ ಫೈರಿಂಗ್ ನಡೆಸ್ತಾರೆ.ಮೇಲಿಂದ ಹೆಲಿಕಾಪ್ಟರ್ ಮೂಲಕವೂ ಕಾರ್ಯಾಚರಣೆ ನಡೆಸಲಾಗಿತ್ತೆ.ಇದನ್ನು ಅಣುಕು ಪ್ರದರ್ಶನದ ಮೂಲಕ ತೋರಿಸಲಾಗಿದ್ದು ಒಂದೇ ಬಾರಿಗೆ ಎಲ್ಲಾ ಕಡೆಯಿಂದ ಫೈರಿಂಗ್ ನಡೆಸೋದು ನೋಡುವಾಗ ಎದೆ ಝಲ್ಲೆನಿಸಿದಂತು ನಿಜ. ಕಾರ್ಯಾಚರಣೆ ಮೇಳೆ ಅಥವಾ ತೂಫಾನ್ ಬಂದ ಸಂದರ್ಭದಲ್ಲಿ ಸಮುದ್ರಲ್ಲಿ ಬಿದ್ದವರನ್ನು ಹೆಲಿಕಾಪ್ಟರ್ ಮೂಲಕ ಹೇಗೆ ರಕ್ಷಣೆ ಮಾಡಲಾಗುತ್ತೆ ಅನ್ನೋದನ್ನೂ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.ಸಮುದ್ರದಲ್ಲೇ ಯುದ್ದ ಆದ ಸಂದರ್ಭದಲ್ಲಿ ಬೆಂಕಿಹತ್ತಿಕೊಂಡರೆ ಯಾವ ರೀತಿ ನೀರು ಹಾಕಿ ನಂದಿಸಲಾಗುತ್ತೆ ಅನ್ನೋದನ್ನು ತೋರಿಸಲಾಗಿದ್ದು ಒಟ್ಟು ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಏನೆಲ್ಲಾ ಕಾರ್ಯಾಚರಣೆ ಮಾಡುತ್ತೆ ಅನ್ನೋದನ್ನು ತೋರಿಸಲಾಯಿತು.ಇಂತಹ ಅಪೂರ್ವ ಕ್ಷಣವನ್ನು ನೋಡಿದವರಂತೂ ನಿಬ್ಬೆರಗಾಗಿ ಮಾತನಾಡಿದ್ರು.
ಕೋಸ್ಟ್ ಗಾರ್ಡ್ ನ ಸಂಸ್ಥಾಪನಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋತ್ ಈ ಎಲ್ಲಾ ಅಣಕು ಕಾರ್ಯಾಚರಣೆಗೆ ಸಾಕ್ಷಿಯಾದ್ರು. ಒಟ್ಟಿನಲ್ಲಿ ಕೋಸ್ಟ್ ಗಾರ್ಡ್ ನವರು ಸಮುದ್ರದಲ್ಲಿ ಏನ್ ಮಾಡ್ತಾರೆ ಅನ್ನೋದನ್ನು ಈ ಅಣಕು ಕಾರ್ಯಾಚರಣೆ ತೋರಿಸಿಕೊಟ್ಟಿದೆ.