ಮಂಗಳೂರು: ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಗಮನಸೆಳೆದ ಮಂತ್ರದೇವತೆ ಟ್ಯಾಬ್ಲೋ
ಕುದ್ರೋಳಿ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆ ವೈಭವದಿಂದ ನಡೆದಿದ್ದು ಈ ಪೈಕಿ ಅಪ್ಪೆ ಮಂತ್ರದೇವತೆ ಟ್ಯಾಬ್ಲೋ ಜನರ ಗಮನ ಸೆಳೆಯಿತು. ನಗರದ ಪದವು ಫ್ರೆಂಡ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ 9ನೇ ವರ್ಷದ ಕಾಣಿಕೆಯಾಗಿ ಮಂತ್ರದೇವತೆ ದೈವದ ಸ್ತಬ್ಧಚಿತ್ರ ಮಾಡಲಾಗಿತ್ತು.
ಅಪ್ಪೆ ಮಂತ್ರದೇವತೆ ಹೆಸರಿನ ಟ್ಯಾಬ್ಲೋದಲ್ಲಿ ದೈವದ ಅಪಚಾರ ಆಗದಂತೆ, ದೈವಾರಾಧನೆ ಮಹತ್ವ ಸಾರುವ ಯತ್ನ ಮಾಡಲಾಯಿತು. ದೈವರಾಧನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಮಂತ್ರದೇವತೆಯ ಕಾರಣಿಕ ಸಾರುವ ಚಿತ್ರಣ ಟ್ಯಾಬ್ಲೋದಲ್ಲಿ ಮೂಡಿಬಂತು.
ಕ್ಲಬ್ ಗೌರವಾಧ್ಯಕ್ಷರಾದ ಕೃಷ್ಣ ಕೋಟ್ಯಾನ್ ಹಾಗೂ ಅಧ್ಯಕ್ಷ ಯತೀನ್ ಮತ್ತು ಕ್ಲಬ್ ಸದಸ್ಯರು ಟ್ಯಾಬ್ಲೋ ಜೊತೆಗೆ ಪಾಲ್ಗೊಂಡಿದ್ದರು.