ಮಂಗಳೂರು: ಉದ್ಯಾನವನ ಉದ್ಘಾಟನೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಉತ್ತರ 32ನೇ ವಾರ್ಡಿನ ಶರ್ಬತ್ ಕಟ್ಟೆಯ ಐಟಿಐ ಬಳಿ ಸರ್ಕಾರಿ ಜಾಗದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸ್ಥಳೀಯರ ಬಹುಬೇಡಿಕೆಯ ಉದ್ಯಾನವನವನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟನೆಗೊಳಿಸಿದರು.
ಹಿರಿಯರು, ಮಕ್ಕಳು, ಸ್ಥಳೀಯರು, ಸೇರಿದಂತೆ ಎಲ್ಲರಿಗೂ ಈ ಉದ್ಯಾನವನ ಉಪಯೋಗಕರವಾಗಲಿದ್ದು ಇಲ್ಲಿನ ಉತ್ತಮ ಗುಣಮಟ್ಟದ ವ್ಯವಸ್ಥೆಗಳಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಮನಪಾ ಸದಸ್ಯೆ ಶ್ರೀಮತಿ ಶಕೀಲಾ ಕಾವ, ಬೂತ್ ಅಧ್ಯಕ್ಷ ಪ್ರವೀಣ್, ಶಕ್ತಿ ಕೇಂದ್ರ ಸಹ ಪ್ರಮುಖ್ ಕಮಲಾಕ್ಷಿ, ಕದ್ರಿ ಹಾಗೂ ದಂಡಕೇರಿಯ ಬೂತ್ ಅಧ್ಯಕ್ಷ ರಾದ ವೆಂಕಟೇಶ್ ಮತ್ತು ಸದಾನಂದ ಪ್ರಭು, ಸಂಧ್ಯಾ ವೆಂಕಟೇಶ್, ಕುಸುಮ ದೇವಾಡಿಗ, ನೈನಾ ವಿಶ್ವನಾಥ್, ಲಕ್ಷ್ಮಿ, ಕೀರ್ತನಾ, ಪವಿತ್ರ, ವಸಂತ್, ಅಜಿತ್, ರೋಷನಿ, ವಸಂತ್ ರಾವ್, ಹರೀಶ್ ಐಟಿಐ, ಬಾಲಕೃಷ್ಣ, ಶಿವಕುಮಾರ್, ಲೋಕೇಶ್, ದೃತೇಶ್, ವಿಜಯ ಶಣೈ, ಗಂಗಾಧರ್, ರಾಮಚಂದ್ರ, ಲೋಕೇಶ್, ಪುಷ್ಪರಾಜ್ ಶೆಟ್ಟಿ, ಶಾಂತ, ಪ್ರವೀಳಾ, ಮಮತಾ ಶೆಟ್ಟಿ, ಅನುರಾಧ ವಿದ್ಯಾ ಗುಲಾಬಿ ನಿರ್ಮಲಾ ಬಿಬಿ ಮಾಧವ ಕೆ ಶಿವರು ದಿವ್ಯ ಜಯಪ್ರದಾ ಶೀಲಾ ಮತ್ತಿತರು ಉಪಸ್ಥಿತರಿದ್ದರು.