ಮಂಗಳೂರು: ವಿಶ್ವ ಹಿಂದೂ ಪರಿಷತ್ ನ ಎಲ್.ಶ್ರೀಧರ್ ಭಟ್ ನಿಧನ
ಜಿಲ್ಲೆಯ ವಿಶ್ವ ಹಿಂದೂ ಪರಿಷತ್’ನ ಪ್ರೇರಕ ಶಕ್ತಿಯಾಗಿದ್ದಂತಹ ಎಲ್.ಶ್ರೀಧರ್ ಭಟ್ ಅವರ ನಿಧನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು.
“ಶ್ರೀಯುತರು ಸಂಘದ ಹಿರಿಯ ಸ್ವಯಂಸೇವಕರು, ಸಂಸ್ಕೃತ ಮತ್ತು ಹಿಂದಿ ಪ್ರಾಧ್ಯಾಪಕರು, ಮಂಗಳ ಸೇವಾಶ್ರಮ, ಗೋ ವನಿತಾಶ್ರಯ ಟ್ರಸ್ಟ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದರು. ಸಾಮಾಜಿಕ ಮತ್ತು ಸೇವಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮಾಡಿಸಿದ್ದ ಅವರ ಅಗಲಿಕೆ ಅಪಾರ ನೋವು ತಂದಿದ್ದು ಭಗವಂತ ಅವರ ಕುಟುಂಬಕ್ಕೆ ಹಾಗೂ ಬಂಧು ಬಳಗಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.