ಮಂಜೇಶ್ವರ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಬಾಲಕ ಆಶಿಲ್
ಬಾಲಕನಿಗೆ ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂಬ ಮಹದಾಸೆಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಜನಕೀಯ ಪೊಲೀಸರು ಈಡೇರಿಸಿದ್ದಾರೆ. ವರ್ಕಾಡಿಯ ಅಝೀಝ್ ಕಲ್ಲೂರು ಹಾಗೂ ಆರಿಫಾ ದಂಪತಿಯ ಪುತ್ರನಾಗಿರುವ ಈತ. ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶೀಲ್ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ ಕೇಕ್ ತುಂಡರಿಸಿ, ಸಿಹಿತಿಂಡಿ ಹಂಚಿ ಆಚರಿಸಿದನು. ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂದು ಆಶೀಲ್ ತಂದೆತಾಯಿ ಬಳಿ ಪಟ್ಟು ಹಿಡಿದಿದ್ಜೇ, ತಂದೆ ಅಝೀಜ್ ಕಲ್ಲೂರುರವರು ಮಂಜೇಶ್ವರ ಠಾಣೆಯ ಜನಕೀಯ ಪೊಲೀಸರನ್ನು ಸಂಪರ್ಕಿಸಿದರು.ಆಶೀಲ್ ನ ಮಹದಾಸೆಯಂತೆ ಮಂಜೇಶ್ವರ ಠಾಣೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಲು ಮಂಜೇಶ್ವರ ಪೊಲೀಸರು ಅವಕಾಶ ಮಾಡಿಕೊಟ್ಟರು. ಮಂಜೇಶ್ವರ ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್, ಎಸ್ ಐ ಟೋನಿ, ಅನ್ಸಾರ್ ಸಹಿತ ಠಾಣೆಯ ಪೆÇಲೀಸರು ಆಶೀಲ್ ನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಶುಭಹಾರೈಸಿದರು.