ಮಂಜೇಶ್ವರ: ಆಟೋ ರಿಕ್ಷಾಗೆ ಶಾಲಾ ಬಸ್ಸು ಡಿಕ್ಕಿ : ಐದು ಮಂದಿ ದಾರುಣ ಸಾವು
ಮಂಜೇಶ್ವರ : ಬದಿಯಡ್ಕ ಪಳ್ಳತ್ತಡ್ಕದಲ್ಲಿ ಆಟೋ ರಿಕ್ಷಾವೊಂದಕ್ಕೆ ಶಾಲಾ ಬಸ್‌ಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಆಟೋ ರಿಕ್ಷಾದಲ್ಲಿದ್ದ ಮೊಗ್ರಾಲ್ ಮೂಲದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೊಗ್ರಾಲ್ ಪುತ್ತೂರು ಕಡವತ್ತ್ ನಿವಾಸಿಗಳಾದ ಆಟೋ ಚಾಲಕ ಅಬ್ದುಲ್ ರವೂಫ್, ಬೀಫಾತಿಮಾ, ನಬೀಸಾ, ಬೀಫಾತಿಮಾ ಮೊಗರ್ ಮತ್ತು ಉಮ್ಮಾಲಿಮಾ ಸಾವನ್ನಪ್ಪಿದ ದುರ್ದೈವಿಗಳು.
ವಿದ್ಯಾರ್ಥಿಗಳನ್ನು ಇಳಿಸಿ ಹಿಂತಿರುಗುತ್ತಿದ್ದ ಶಾಲಾ ಬಸ್ ಅಪಘಾತಕ್ಕೀಡಾಗಿದೆ.
ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಅಪಘಾತದಲ್ಲಿ ಆಟೋರಿಕ್ಷಾ ಸಂಪೂರ್ಣ ನುಜ್ಜು ಗುಜ್ಜಾಗಿದೆ.