ಮಂಜೇಶ್ವರ :ವಿದ್ಯಾರ್ಥಿಗಳ ರ್‍ಯಾಗಿಂಗ್ ವೀಡಿಯೋ ವೈರಲ್
ಮಂಜೇಶ್ವರ: ಪ್ಲಸ್ ಒನ್ ವಿದ್ಯಾರ್ಥಿಯನ್ನು ಪ್ಲಸ್ ಟು ವಿದ್ಯಾರ್ಥಿಗಳು ರ್‍ಯಾಗಿಂಗ್ ವಿಚಾರದ ವೀಡಿಯೊದಿದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾದ ಬೆನ್ನಲ್ಲೇ ಕೇರಳದ ಶಿಕ್ಷಣ ಸಚಿವರು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ಆದಷ್ಟು ಬೇಗನೆ ತನಿಖಾ ವರದಿ ನೀಡಲು ನಿರ್ದೇಶಿಸಲಾಗಿದೆ. ಕುಂಬಳೆ ಸಮೀಪದ ಅಂಗಡಿ ಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಶಾಲೆ ಬಿಟ್ಟ ಬಳಿಕ ನಡೆದುಕೊಂಡು ಹೋಗುತಿದ್ದ 16ರ ಹರೆಯದ ಪ್ಲಸ್ ಒನ್ ವಿದ್ಯಾರ್ಥಿಯನ್ನು ಪ್ಲಸ್ ಟು ನಲ್ಲಿ ಕಲಿಯುತ್ತಿರುವ ಕೆಲವೊಂದು ವಿದ್ಯಾರ್ಥಿಗಳು ಬಸ್ಸು ನಿಲ್ದಾಣದ ಪಕ್ಕದಲ್ಲಿ ತಡೆದು ನಿಲ್ಲಿಸಿ ಮೋಟಾರು ಸೈಕಲ್ ಸವಾರಿ ಮಾಡುವ ರೀತಿಯಲ್ಲಿ ನಟಿಸಲು ಒತ್ತಾಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವ ಹಾಗೂ ವೀಡಿಯೋ ವೈರಲಾಗಿದೆ.
ಕೂಡಲೇ ಎಚ್ಚೆತ್ತುಕೊಂಡ ಶಾಲಾ ಅಧ್ಯಾಪಕರು ಹಾಗೂ ಪಿ ಟಿ ಎ ಅಧಿಕೃತರು ಕುಂಬಳೆ ಪೆÇಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೆÇಲೀಸರು ವಿದ್ಯಾರ್ಥಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ರಾಗಿಂಗ್‍ಗೊಳಗಾದ ವಿದ್ಯಾರ್ಥಿಗಳ ಪೆÇೀಷಕರು ದೂರು ನೀಡಿದ್ರೆ ಕೇಸು ದಾಖಲಿಸಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.