ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ಲೀಗಲ್ ಫಾರಂ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡರು. ನಗರದ ಮ್ಯಾಪ್ಸ್ ಕಾಲೇಜಿನ ಅಡಿಟೋರಿಯಂನಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶೋಭಾ ಬಿ.ಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮ್ಯಾಪ್ಸ್ ಕಾಲೇಜಿನಲ್ಲಿ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಪ್ರತಿಯೊಬ್ಬರು ರಕ್ತದಾನ ಮಾಡಿ ಇನ್ನೊಂದು ಜೀವವನ್ನು ಉಳಿಸಲು ಸಹಾಯವನ್ನು ಮಾಡಿ ಎಂದು ಹೇಳಿದರು.

ಆನಂತರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ. ಆಂಟೋನಿ ಅವರು ಮಾತನಾಡಿ ರಕ್ತದಾನದ ಮಹತ್ವವನ್ನು ತಿಳಿಸಿದರು.
ಮ್ಯಾಪ್ಸ್ ಗ್ರೂಫ್ ಆಫ್ ಕಾಲೇಜಿನ ಚೇರ್‍ಮೆನ್ ದಿನೇಶ್ ಕುಮಾರ್ ಆಳ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷದಿಂದ ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ಶಿಬಿರವನ್ನು ಆಯೋಜಿಸಿದ್ದು, ಯುವಕರ ಪ್ರೋತ್ಸಾಹದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭ ವೆನ್ಲಾಕ್ ಆಸ್ಪತ್ರೆಯ ವೈದ್ಯರಾದ ಡಾ. ವಿಜಯಶ್ರೀ, ಮಂಗಳೂರು ತಾಲೂಕು ಲೀಗಲ್ ಫಾರಂನ ಅಧ್ಯಕ್ಷರಾದ ಚಂದ್ರಹಾಸ ಕದ್ರಿ, ಎನ್‍ಎಸ್‍ಎಸ್ ಕೋ-ಅರ್ಡಿನೇಟರ್ಸ್ ಚೇತನ್, ಗಣೇರ್ಶ, ಪ್ರಾಂಶುಪಾಲರಾದ ಶೃತಿ ಶೆಟ್ಟಿ, ಎನ್‍ಎಸ್‍ಎಸ್ ಸ್ಟುಡೆಂಟ್ ಕೋ-ಅರ್ಡಿನೇಟರ್ ಸಂಕೇತ್ ರೈ, ಹೆನ್ನಾ ಜಲೀಲ್ ಉಪಸ್ಥಿತರಿದ್ದರು.