ಮೂಲ ಸೌಕರ್ಯ ವಂಚಿತ ತ್ರಾಸಿ ಮರವಂತೆ ಬೀಚ್ : ಸೂಕ್ತ ಭದ್ರತೆಗೆ ಸ್ಥಳೀಯರ ಆಗ್ರಹ
ಬೈಂದೂರು: ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಕಡಲ ಸೌಂದರ್ಯ ನೋಡಲು ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಪ್ರವಾಸಿ ತಾಣದ ಅಭಿವೃದ್ಧಿ ಸೇರಿದಂತೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಒಂದು ಕಡೆ ಸಮುದ್ರ ಇನ್ನೊಂದು ಕಡೆ ನದಿ ಮಧ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಗುವುದೇ ರೋಚಕದ ಅನುಭವ. ರಸ್ತೆಯಲ್ಲಿ ಸಂಚಾರ ಮಾಡುತ್ತಲೆ ಕಡಲ ತೀರಕ್ಕೆ ಹಾಲಿನ ನೊರೆಯಂತೆ ಧುಮುಕ್ಕಿ ಬರುವ ಕಡಲ ಅಲೆಗಳ ಸೌಂದರ್ಯವನ್ನು ಕಣ್ಣುತುಂಬಿ ಕೊಳ್ಳಬಹುದು. ತ್ರಾಸಿಯಿಂದ ಆರಂಭಗೊಂಡು ಮರವಂತೆ ಸಿಲ್‍ಲ್ಯಾಂಡ್ ತನಕ ಬೀಚಿನ ಸೌಂದರ್ಯ ಕಣ್ಣಿಗೆ ರಾಚಿಸುತ್ತದೆ. ಪ್ರಕೃತಿ ಸೌಂದರ್ಯವನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ದಿನಂಪ್ರತಿ ಮರವಂತೆ ಮತ್ತು ತ್ರಾಸಿ ಬೀಚ್‍ಗೆ ಭೇಟಿ ನೀಡುತ್ತಾರೆ.
ಬಿಪರ್ ಜಾಯ್ ಚಂಡಮಾರುತದ ಅಬ್ಬರಕ್ಕೆ ಕಳೆದ ಕೆಲ ದಿನಗಳಿಂದ ಅಲೆಗಳ ಅಬ್ಬರ ಹೆಚ್ಚುತ್ತಿದ್ದು, ಇದರ ಮಧ್ಯೆಯೂ ಪ್ರವಾಸಿಗರು ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆಯುವುದು, ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಕ್ಕಳು, ಮಹಿಳೆಯರ ಸಹಿತ ಅನೇಕರು ತಡೆಗೋಡೆಯಲ್ಲಿ, ನೀರಿಗಿಳಿದು ವಿಹರಿಸುತ್ತಿರುವುದು ಕಂಡು ಬಂದಿದೆ.
ತ್ರಾಸಿ- ಮರವಂತೆ ಚತುಷ್ಪಥ ಹೆದ್ದಾರಿಯುದ್ದಕ್ಕೂ ನಿರ್ಮಿಸಿದ ತಡೆಗೋಡೆಗೆ ಅಲೆಗಳು ಅಪ್ಪಳಿಸುತ್ತಿರುವ ದೃಶ್ಯ ಕಣ್ತುಂಬಲು ಪ್ರವಾಸಿಗರು ಮುಗಿ ಬೀಳುವುದು ಭೀತಿ ಹುಟ್ಟಿಸುವಂತಿದೆ. ಕಡಲ್ಕೊರೆತ ತಡೆಗೆ ಹಾಕಿದ ಕಲ್ಲು, ಬಂಡೆಗಳ ತುದಿಯವರೆಗೆ ಹೋಗಿ ಭಾರಿ ಅಲೆಗಳು ಅಪ್ಪಳಿಸುವ ಸನಿಹದಲ್ಲೇ ಫೆÇೀಟೋ ತೆಗೆಯುವುದು, ಸಮುದ್ರಕ್ಕೆ ಇಳಿಯುವುದು ಮಾಡುತ್ತಿದ್ದಾರೆ.
ತ್ರಾಸಿ ಮರವಂತೆಯ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯ ಕೊರತೆ ಎದ್ದು ಕಾಣುವಂತಿದೆ. ರಸ್ತೆಯ ಪಕ್ಕದಲ್ಲಿ ಲಾರಿಗಳು ನಿಲ್ಲುತ್ತಿದೆ. ಯಾವುದೇ ರೀತಿಯ ಪಾರ್ಕಿಂಗ್ ವ್ಯವಸ್ಥೆ ಕಯಿಲ್ಲ. ಸ್ಥಳೀಯರು ಎಷ್ಟು ಬಾರಿ ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಿಕೊಂಡರು ಸಹ ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬುವುದು ಸ್ಥಳೀಯರ ಆರೋಪ