ಮಸೂದ್ ಹತ್ಯೆ,ಕುಟುಂಬಸ್ಥರ ಜೊತೆ ನಿಂತ ವಿಪಕ್ಷ ಉಪ ನಾಯಕ ಶಾಸಕ ಯು.ಟಿ.ಖಾದರ್

ಸುಳ್ಯ ತಾಲೂಕಿನ ಕಳಂಜದಲ್ಲಿ ಮೊನ್ನೆ ರಾತ್ರಿ ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾದ ಮಸೂದ್ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದು ಯು.ಟಿ.ಖಾದರ್ ತೀವ್ರ ಖಂಡನೆ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯ ಮುಖಂಡರು ಜಿಲ್ಲಾಡಳಿತ ಪರಿಹಾರ ಘೋಷಿಸುವ ವರೆಗೂ ಮಯ್ಯತ್ (ಮೃತ ಶರೀರ) ನ್ನು ಪಡೆಯುವುದಿಲ್ಲ ಎಂಬುದಾಗಿ ಧರಣಿ ನಿರತರಾಗಿದ್ದು ಸ್ಥಳಕ್ಕೆ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ತೆರಳಿ ಮಾತುಕತೆ ನಡೆಸಿದರು.

ಯು.ಟಿ.ಖಾದರ್ ರವರು ಜಿಲ್ಲಾಧಿಕಾರಿ,ತಹಶೀಲ್ದಾರ್ ಪೋಲಿಸ್ ಇಲಾಖೆಯ ಅಧಿಕಾರಿಗಳು,ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯ ಮುಸ್ಲಿಮ್ ಮುಖಂಡರ ಜೊತೆ ಮಾತುಕತೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿ ಮಯ್ಯತ್ ಪಡೆದು ಅಂತಿಮ ವಿಧಿ ವಿಧಾನ ನೆರವೇರಿಸುವಂತೆ ವಿನಂತಿಸಿದರು. ಘಟನೆಗೆ ಸಂಬಂಧಿಸಿದಂತೆ ಅಂದು ರಾತ್ರಿ ಸಂಧಾನಕ್ಕೆ ಕರೆದವರ ವಿರುದ್ಧವೂ ಅವರ ಹಿನ್ನೆಲೆಯನ್ನು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲಿಸ್ ಇಲಾಖೆಗೆ ಸೂಚನೆ ನೀಡಿದರು. ಈಗಾಗಲೇ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸದಾಗಿದ್ದು ಮೃತರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ಘೋಷಿಸುವಂತೆಯೂ ಸರಕಾರಕ್ಕೆ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
