ಪ್ರಥಮ ಪ್ರದರ್ಶನದಲ್ಲೇ ಪ್ರೇಕ್ಷಕರ ಮನಗೆದ್ದ “ಮಾಯೊದ ಮಹಾಶಕ್ತಿಲು”

ಎಂ.ಕೆ. ಬಾಲರಾಜ್‌ ಸಾರಥ್ಯದ “ಎಂಕಲ್ನ ಕಲಾವಿದೆರ್” ಮಟ್ಟು ಕಟಪಾಡಿ ಅಭಿನಯಿಸಿದ “ಮಾಯೊದ ಮಹಾಶಕ್ತಿಲು” ಎಂಬ ತುಳು ಭಕ್ತಿ ಪ್ರಧಾನ ಅದ್ಧೂರಿ ನಾಟಕ ಪ್ರಥಮ ಪ್ರಯೋಗದಲ್ಲೇ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕಳೆದ ಏಳನೇ ತಾರೀಕಿನಂದ್ದು ಉಡುಪಿಯ ಅಜ್ಜರಗಾಡು ಭುಜಂಗ ಪಾರ್ಕಿನ ಬಯಲು ರಂಗಮಂದಿರಲ್ಲಿ ನಡೆದ ನಾಟಕ ವೀಕ್ಷಿಸಲು ಕಲಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ನಾಟಕದ ಪ್ರತಿಯೊಂದು ಮಜಲುಗಳನ್ನು ಆಡಿಕೊಂಡಾಡಿ ನಾಟಕ ತಂಡಕ್ಕೆ ಶುಭ ಆರೈಸಿದ್ದಾರೆ.


ನವೀನ್ ಪಡ್ರೆಯವರು ಈ ನಾಟಕಕ್ಕೆ ಬರೆದ ಸಾಹಿತ್ಯ ಹಾಗೂ ಸಂಭಾಷಣೆ ಕಲಾಭಿಮಾನಿಗಳ ಮನ ತಟ್ಟುವಲ್ಲಿ ಯಶಸ್ಸು ಕಂಡಿರೆ. ದಿವಾಕರ್ ಕಟೀಲ್ ಹಾಗೂ ನಾಗರಾಜ್ ರಾವ್ ವರ್ಕಾಡಿ ಈ ಅವಳಿ ದಿಗ್ಗಜ್ಜರ ನಿರ್ದೇಶನದಲ್ಲಿ ನಾಟಕ ಯಶಸ್ಸಿನ ಶಿಖರ ಮುಟ್ಟುವಂತ್ತಾಗಿದ್ದು ಸುಳ್ಳಲ್ಲ. ಈ ಎಲ್ಲಾ ವಿಚಾರಗಳಿಗೆ ಪೂರಕವಾಗಿ ಗಣೇಶ್ ಜಿ.ಎನ್.ಎಸ್ ಹಾಗೂ ಚಂದ್ರಶೇಖರ ಇವರ ತಂಡದ ರಂಗ ವಿನ್ಯಾಸ ನಾಟಕದ ಫವರ್ ಫುಲ್ ಅಂಶ ಎಂದರೂ ತಪ್ಪಾಗಲಾರದು. ಪ್ರತೀ ಒಂದು ದೃಶ್ಯವೂ ನೈಜ್ಯತೆ ಉಳಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ಸಂಗೀತ ಮಾಂತ್ರಿಕ ಶರತ್ ಉಚ್ಚಿಲರ ಸಂಗೀತ ನಿರ್ದೇಶನ ನಾಟಕದ ಪ್ಲಸ್ ಪಾಯಿಂಟ್, ಜಯಕರ್ ಉಡುಪಿ ತಂಡದ ಧ್ವನಿ ಬೆಳಕಿನ ಚಾಕಚಕ್ಯತೆ ಪ್ರೇಕ್ಷಕರನ್ನು ಯಾವುದೋ ಲೋಕಕ್ಕೆ ಕೊಂಡ್ಯೊದಿದೆ. ಅವರವರ ಜವಾಬ್ದಾರಿಯನ್ನು ಪರಿಪೂರ್ಣವಾಗಿ ಅವರವರೇ ನಿಬಾಯಿಸಿ ಯಶಸ್ಸು ಕಂಡರೆ, ಅದೇ… ನಾಟಕದ ಪ್ರತೀಯೊಂದು ಮಜಲುಗಳಲ್ಲೂ ತನ್ನನ್ನು ತಾನು ಪರಿಪೂರ್ಣವಾಗಿ ತೊಡಗಿಸಿಕೊಂಡು ಸಮಗ್ರ ನಿರ್ವಾಹಣೆ ಮಾಡಿದ ರಂಜಿತ್ ಮಟ್ಟುರವರಿಗೆ ನಾಟಕದ ಯಶಸ್ಸಿನ ಸಿಂಹಪಾಲು ಸಲ್ಲುತ್ತೆ.
ಬೇರೆ ಬೇರೆ ಜಿಲ್ಲೆಗಳ ಪ್ರತಿಭೆಗಳ ಗೊಂಚಲುಗಳನ್ನು ಪೊನಿಸಿ ಕಟ್ಟಿದ ತಂಡವೇ “ಎಂಕಲ್ನ ಕಲಾವಿದೆರ್” ಕಟಪಾಡಿ ಮಟ್ಟು. ನಾಟಕ ಪ್ರದರ್ಶಕ್ಕಾಗಿ ಇಷ್ಟರಲ್ಲೇ ಸಾಕಷ್ಟು ಬುಕ್ಕಿಂಗ್ ಕಾರ್ಯ ಆರಂಭಗೊಂಡಿದೆ…ಕನ್ನಡದಲ್ಲೂ ಈ ನಾಟಕದ ಸ್ವರ ಅಚ್ಚಾಗಲಿದ್ದು ಎಲ್ಲೆಡೆ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವ ಸಂಘಟಕರ ಪ್ರಯತ್ನ ಹಾಗೂ ಕಲಾಭಿಮಾನಿಗಳ ಸಹಕಾರದಿಂದ ಈ ವಿಭಿನ್ನ ಅದ್ಧೂರಿಯ ಭಕ್ತಿ ಪ್ರಧಾನ ಪೌರಾಣಿಕ ನಾಟಕ ಸಹಸ್ರಾರು ಪ್ರದರ್ಶನ ಕಾಣುವುದರಲ್ಲಿ ಎರಡು ಮಾತಿಲ್ಲ.

VK add- 2024 march

Related Posts

Leave a Reply

Your email address will not be published.