ಮೂಡುಬಿದಿರೆ: ಆಘಾತ ತರಂಗ ಮಾಪನ ವ್ಯವಸ್ಥೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಪೇಟೆಂಟ್

ಮೂಡುಬಿದಿರೆ: ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸ್ಮಾರ್ಟ್ ಶಾಕ್‌ವೇವ್ ವೆಲಾಸಿಟಿ ಮೆಷರ್‌ಮೆಂಟ್ ಸಿಸ್ಟಮ್ (ಸ್ಮಾರ್ಟ್ ಆಘಾತ ತರಂಗಗಳ ವೇಗ ಮಾಪನ ವ್ಯವಸ್ಥೆ) ಪೇಟೆಂಟ್ ಪಡೆದುಕೊಂಡಿದೆ.
ಈ ಆವಿಷ್ಕಾರವು ಕೇವಲ ಆಘಾತ ತರಂಗಗಳ ವೇಗ ಮಾಪನ ಮಾತ್ರವಲ್ಲ, ವಿವಿಧ ಅನುಷ್ಠಾನಗಳು ಹಾಗೂ ಅಗ್ನಿ ಸಂಬಂಧಿತ ಹಾಗೂ ಬೆಳಕಿನ ತಂತ್ರಜ್ಞಾನದಲ್ಲಿ ವಿಶೇಷವಾಗಿ ಕ್ರಾಂತಿಕಾರಿ ಕೊಡುಗೆ ನೀಡಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸಂಶೋಧನಾ ಡೀನ್ ಡಾ.ರಿಚರ್ಡ್ ಪಿಂಟೊ ಅವರ ನಾಯಕತ್ವದಲ್ಲಿ ಈ ಸಾಧನೆ ನೆರವೇರಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರ ಪ್ರೋತ್ಸಾಹದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡಿಸ್, ಪ್ರಾಧ್ಯಾಪಕ ಡಾ. ರಾಮಪ್ರಸಾದ್ ಅರಂತಾಡಿ ತಿಮ್ಮಪ್ಪ, ಡಾ. ಜಯರಾಮ ಅರಸಲಿಕೆ ಮತ್ತು ಡಾ. ಅರ್ಜುನ್ ಸುನಿಲ್ ರಾವ್ ಅವರ ತಜ್ಞ ಮಾರ್ಗದರ್ಶನವು ಸಹಕಾರಿಯಾಗಿದೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅನೂಪ್ ರಾಧಾ ಬಾಲನ್, ಜ್ಯೋತಿಷ್ ಕುಮಾರ್ ಕುಂಞ ಪುರಯಿಲ್ ಮತ್ತು ಅರ್ಜುನ್ ಅಶೋಕ ಅಂಬತ್ತುಪರಾಂಬಿಲ್ ಅವರು ಡಾ. ರಿಚರ್ಡ್ ಪಿಂಟೊ ಮಾರ್ಗದರ್ಶನದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಅವರ ಸಂಪೂರ್ಣ ಪ್ರೋತ್ಸಾಹದ ಪರಿಣಾಮ ಈ ಕಾರ್ಯವು ಫಲಪ್ರದವಾಗಿದೆ. ಸಂಶೋಧನೆಗೆ ಅವರು ನೀಡಿದ ಬೆಂಬಲವು ಯಶಸ್ಸಿಗೆ ಕಾರಣವಾಗಿದೆ.

Nippon

Related Posts

Leave a Reply

Your email address will not be published.