ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಪ್ರವೇಶಕ್ಕೆ 15,986 ವಿದ್ಯಾರ್ಥಿಗಳು ಹಾಜರು

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ಕನ್ನಡ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ಭಾನುವಾರದಂದು ಪ್ರವೇಶ ಪರೀಕ್ಷೆ ನಡೆಸಿದ್ದು ನಾಡಿನ ಮೂಲೆ ಮೂಲೆಯಿಂದ ವಿದ್ಯಾಗಿರಿಗೆ 15,986 ಹೆಚ್ಚಿನ ವಿದ್ಯಾರ್ಥಿಗಳು ಅವರ ಪೋಷಕರು, ಜತೆಗೂಡಿ ಆಗಮಿಸಿ ವಿದ್ಯಾಗಿರಿ ಮತ್ತು ಪುತ್ತಿಗೆಯಲ್ಲಿ ಪರೀಕ್ಷೆಯನ್ನು ಬರೆದಿದ್ದಾರೆ.

ಪ್ರತೀ ವರ್ಷದಂತೆ ಈ ಬಾರಿಯೂ ತನ್ನ ಕನಸಿನ ನಾಡಿನ ಏಕೈಕ ಶೂನ್ಯ ಶುಲ್ಕದ ಕನ್ನಡ ಮಾಧ್ಯಮ ಶಾಲೆಗೆ ಉಚಿತ ದಾಖಲಾತಿ ಕೋರಿ ಹೊರಡಿಸಿದ್ದ ಪ್ರಕಟಣೆಗೆ ಸ್ಪಂದಿಸಿ ಬಂದಿದ್ದ ಅರ್ಜಿಗಳು ಈ ಪೈಕಿ ಹಾಜರಾಗಿ ಪರೀಕ್ಷೆ ಬರೆದು ದಾಖಲಾತಿ ಪ್ರಕ್ರಿಯೆ ಮುಗಿಸಿ ಮುಗಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ನಿನ್ನೆಯೇ ವಿದ್ಯಾಗಿರಿಗೆ ಆಗಮಿಸಿದ್ದು ಬೆಳಗಿನ ವೇಳೆ ಕ್ಯಾಂಪಸ್ ನ ಸುತ್ತಲೂ ಪುಟ್ಟ ಮಕ್ಕಳು ಮತ್ತು ಅವರ ಹೆತ್ತವರು ತುಂಬಿ ಹೋಗಿದ್ದರು. ಇದನ್ನೆಲ್ಲಾ ಗಮನಿಸಿದಾಗ ಹೆತ್ತವರಿಗೆ ಕನ್ನಡ ಮಾಧ್ಯಮದ ಬಗ್ಗೆ ಇರುವ ಒಲವು ಬಗ್ಗೆ ಎದ್ದು ಕಾಣುತ್ತಿತ್ತು.


ಬಂದವರಿಗೆಲ್ಲ ವಸತಿ, ಸುಧಾರಿಕೆಗೆ ವ್ಯವಸ್ಥೆ ಒದಗಿಸಿದ್ದರೂ ಹೆಚ್ಚಿನ ಪೋಷಕರು, ಬಂದಿದ್ದವರು ವಿದ್ಯಾಗಿರಿಯ ಪರೀಕ್ಷಾ ಕೇಂದ್ರಗಳ ಕಟ್ಟಡದ ಹೊರ ಭಾಗದಲ್ಲಿ ವಿಶಾಲ ರಾಜ ಬೀದಿ, ಹಸಿರ ಮಡಿಲ ಆವರಣದಲ್ಲಿ ಕಟ್ಟಡ,ಉದ್ಯಾನವನದ ನೆರಳಲ್ಲಿ ದಣಿವಾರಿಸಿಕೊಳ್ಳುತ್ತಿದ್ದ, ಲಗ್ಗೇಜುಗಳ ರಾಶಿ ನಡುವೆ ನಿದ್ದೆಗೆ ಜಾರಿದ್ದ ನೋಟಗಳು, ಸಹಸ್ರಾರು ವಾಹನಗಳು ತುಂಬಿಕೊಂಡಿತ್ತು.

ಈ ಕನ್ನಡ ಮಾಧ್ಯಮ ಮಾದರಿ ಶಾಲೆಗೆ ಕಳೆದ ಏಳು ವರ್ಷಗಳಿಂದ ಶಿಕ್ಷಣ ಇಲಾಖೆ ರಾಜ್ಯದ ನಂ.1 ಶಾಲೆ ಎಂದು ಪ್ರಮಾಣ ಪತ್ರವನ್ನೇನೋ ನೀಡಿದೆ. ಆದರೆ ಈ ಮಾದರಿ ಯಶಸ್ವೀ ವ್ಯವಸ್ಥೆಯನ್ನು ಪರಿಶೀಲಿಸಿ ಅಳವಡಿಸಿಕೊಳ್ಳಲು ಮುಂದಾಗಿಲ್ಲ. ಸರಕಾರವೂ ಮಾದರಿ ಶಾಲೆಗಳಲ್ಲಿ ವ್ಯಯಿಸುವ ಅನುದಾನವನ್ನು ನೀಡಿ ಮಕ್ಕಳನ್ನು ಒದಗಿಸುವ ಅವಕಾಶ ಕಲ್ಪಿಸಿದಲ್ಲಿ ಅದೆಷ್ಟೇ ಮಕ್ಕಳು ಬಂದರೂ ಅವರಿಗೂ ಮಾದರಿ ಶಿಕ್ಷಣ ವ್ಯವಸ್ಥೆ ನೀಡಲು ಬದ್ಧ ಎಂದು ಪರೀಕ್ಷಾ ವ್ಯವಸ್ಥೆಯ ಪರಿಶೀಲನೆಗೆ ಖುದ್ದು ಹಾಜರಾಗಿದ್ದ ಡಾ. ಎಂ. ಮೋಹನ್ ಆಳ್ವ ತಿಳಿಸಿದರು.

Related Posts

Leave a Reply

Your email address will not be published.