ಮೂಡುಬಿದಿರೆ : ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ, ಐವರು ನಾಟಿ ವೈದ್ಯರಿಗೆ ಸಮ್ಮಾನ
ಮೂಡುಬಿದಿರೆ : ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿ ಇವುಗಳ ಆಶ್ರಯದಲ್ಲಿ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ‘ಕ್ಯಾನ್ಸರ್ ಜಾಗೃತಿ’ ಕಾರ್ಯಾಗಾರ ನಡೆಯಿತು.
ವಿದ್ಯಾಗಿರಿಯ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ| ಸುರೇಖಾ ಪೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ
ಸಕಾಲದಲ್ಲಿ ಹಿತ ಮಿತ ಆಹಾರ ಸೇವನೆ, ಮುಂಜಾನೆ ಸಂಜೆ ವಿಹಾರ, ವ್ಯಾಯಾಮ, ಮಾನಸಿಕ ಸ್ವಾಸ್ಥ್ಯ ಮತ್ತು ನಿದ್ರೆ ಮೊದಲಾದ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಗುಣಪಾಲ ಮುದ್ಯ ಅಧ್ಯಕ್ಷತೆ ವಹಿಸಿದ್ದರು. ఎంసిಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಕಾರ್ಯಗಾರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ ಗಳಾಗಿ ಶಾಸಕ ಉಮಾನಾಥ ಎ. ಕೋಟ್ಯಾನ್ ಭಾಗವಹಿಸಿದ್ದರು. ಸೊಸೈಟಿ ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರ ಶೇಖರ ಎಂ. ಉಪಸ್ಥಿತರಿದ್ದರು.
ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಶಲ್ಯ ತಂತ್ರ ವಿಭಾಗದ ಪ್ರೊ| ಡಾ| ಮಹಾಬಲೇಶ್ವರ ಎಸ್. ಅವರು ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಅತ್ತಾವರ ಕೆಎಂಸಿಯ ಡಾ। ಅಭಿಷೇಕ್ ಕೃಷ್ಣ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ಕಾರ್ತಿಕ್ ನಾಯಕ್, ರೇಡಿಯೇಶನ್ ವಿಭಾಗದ ಮಮತಾ ಸುವರ್ಣ ಭಾಗವಹಿಸಿ ಪಿಪಿಟಿ ಮೂಲಕ ಕ್ಯಾನ್ಸರ್ ಕುರಿತು ವಿವರಣೆ ನೀಡಿದರು.
ಎಲ್‌ಐಸಿ ಮೂಡುಬಿದಿರೆ ಶಾಖೆಯ ಪ್ರಬಂಧಕ ಯಜ್ಞೇಶ್ ಸಿ.ಎಚ್. ಇವರು ಎಲ್‌ಐಸಿಯ ಕ್ಯಾನ್ಸರ್ ಕವರ್ ಪ್ಲಾನ್ 905 ಕುರಿತು ಮಾಹಿತಿ ನೀಡಿದರು.
ನಾಟಿ ವೈದ್ಯರಿಗೆ ಸಮಾನ : ವಾಲ್ಪಾಡಿಯ ಶೇಖರ ಗೌಡ, ನಾಗರಕಟ್ಟೆಯ ಮೀರಾ ಮಲ್ಯ, ಕೋಟೆಬಾಗಿಲು ಲಲಿತಾ, ಬೆಳುವಾಯಿ ಮುರ್ಕತ್‌ಪಲ್ಕೆಯ ಜಗನ್ನಾಥ ಪೂಜಾರಿ, ನಡ್ಯೋಡಿ ಪುನೈದಡಿ ಮನೆ ಪುಷ್ಪಾ ಎಸ್. ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ಗುಣಪಾಲ ಮದ್ಯ ಸ್ವಾಗತಿಸಿ, ದೇವದಾಸ ಕಿಣಿ ನಿರೂಪಿಸಿ, ಕೃ.ವಿ.ವಿ. ಕೇಂದ್ರದ ಕಾರ್ಯದರ್ಶಿ ಅಭಯಕುಮಾರ್
ವಂದಿಸಿದರು.