ಪಡುಬಿದ್ರಿ: ವ್ಯವಸ್ಥಿತವಾಗಿ ನಡೆಯಲಿದೆ ಉಚ್ವಿಲ ದಸರಾ: ನಾಡೋಜ ಜಿ. ಶಂಕರ್
ಬರಗಾಲದ ಹಿನ್ನಲೆಯಲ್ಲಿ ಉಚ್ಚಿಲ ದಸರಾ ವಿಜ್ರಂಭಣೆಯಾಗಿ ಅಲ್ಲವಾದರೂ ಎಲ್ಲೂ ಯಾವುದಕ್ಕೂ ಚ್ಯುತಿ ಬಾರದಂತೆ ವ್ಯವಸ್ಥಿತವಾಗಿ ನಡೆಯಲಿದೆ ಎಂಬುದಾಗಿ ನಾಡೋಜ ಜಿ. ಶಂಕರ್ ಹೇಳಿದ್ದಾರೆ.ಅವರು ಉಚ್ಚಿಲ ಮೊಗವೀರ ಸಭಾಗಣದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಈ ಬಾರಿಯ ಉಚ್ಚಿಲ ದಸರಾವನ್ನು ಉಡುಪಿ ಜಿಲ್ಲಾಧಿಕಾರಿಯವರು ಉದ್ಘಾಟಿಸಲಿದ್ದು, ಕಳೆದ ಬಾರಿಯಂತೆ ಹೆಲಿಕಾಪ್ಟರ್ ಬಳಕೆ ಇಲ್ಲವಾದ ಕಾರಣ ಮೈಸೂರು ಅಂಭಾರಿಯನ್ನು ಹೊಲುವ ರೀತಿಯಲ್ಲಿ ಆನೆಯ ಪ್ರತಿಕೃತಿ ಬಹಳ ಉತ್ತಮ ರೀತಿಯಲ್ಲಿ ಮಾಡಿ ಶೋಭಾಯಾತ್ರೆಯಲ್ಲೂ ಅದನ್ನು ಬಳಕೆ ಮಾಡಲಾಗುವುದು. ಈ ಬಾರಿ ಕಳೆದ ಬಾರಿಯಂತೆ ಬೇಕಾಬಿಟ್ಟಿ ಟ್ಯಾಬ್ಲೊ ಗಳಲ್ಲಿ ವ್ಯವಸ್ಥಿತವಾಗಿಯೂ ಅರ್ಥಗರ್ಭಿತವಾಗಿಯೂ ಕೆಲವೇ ಕೆಲವು ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿದ್ದು, ಈ ಬಾರಿ ಶೋಭಾಯಾತ್ರೆ ಸಂಚರಿಸುವ ಮಾರ್ಗವನ್ನು ಕಡಿಮೆಗೊಳಿಸಿದ್ದು, ಎರ್ಮಾಳು ದೇವಸ್ಥಾನದವರಗೆ ಸಾಗಿ ಅಲ್ಲಿಂದ ಕಾಪು ದೀಪಸ್ತಂಭದ ಬಳಿ ಜಲಸ್ತಂಭನಗೊಳಲಿದರ. ಶೋಭಾಯಾತ್ರೆ ಸಂಜೆ ನಾಲ್ಕರ ಸುಮಾರಿಗೆ ಹೊರಟು ರಾತ್ರಿ ಹನ್ನೊಂದರ ಸುಮಾರಿಗೆ ಸಮಾಪ್ತಿಯಾಗಲಿದೆ ಎಂದರು.
ಸುದ್ಧಿ ಗೋಷ್ಠಿಯಲ್ಲಿದ.ಕ. ಮೊಗವೀರ ಮಹಾಜನಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಢಳಿತ ಮಂಡಳಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜರ್ಣೋಧ್ದಾರ ಸಮಿತಿ ಅಧ್ಯಕ್ಷ ಗುಂಡು ವಿ. ಅಮೀನ್, ಮಹಿಳೆ ವಿಭಾಗದ ಅಧ್ಯಕ್ಷೆ ಉಷಾ,ರಾಣಿ ಮಹಾಜನ ಸಂಘದ ಉಪಾಧ್ಯಕ್ಷ ಶುಭಾಶ್ ಚಂದ್ರಕಾಂಚನ್, ಪ್ರದಾನ ಕಾರ್ಯದರ್ಶಿ ಸುಧಾಕರ್ ಕುಂದರ್, ಕಾಪು ನಾಲ್ಕು ಪಟ್ಣ ಸಂಯುಕ್ತ ಸಭಾ ಅಧ್ಯಕ್ಷ ಮನೋಜ್ ಕಾಂಚನ್, ಕಾಪು ನಾಲ್ಕುಪಟ್ಣ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗುಣಾ ಕರ್ಕೇರ ಹಾಗೂ ದೇವಳದ ಮ್ಯಾನೇಜರ್ ಸತೀಶ್ ಅಮೀನ್ ಉಪಸ್ಥಿತರಿದ್ದು