ಮೂಡುಬಿದಿರೆ : ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಭತ್ತದ ನಾಟಿ
ಮೂಡುಬಿದಿರೆ: ಸಾಂಪ್ರಾದಾಯಿಕ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಳ್ವಾಸ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮಿಜಾರು ಇಲ್ಲಿನ ತುಳು ಸಂಘವು ಸಾಂಪ್ರಾದಾಯಿಕ ಬತ್ತದ ನಾಟಿ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು.
ಡಾ.ಪ್ರಮೀಳ ಕೊಳಕೆ ಮತ್ತು ಪ್ರೊ.ಪ್ರಮೋದ್ ಕಾರಂತ್ ಅವರ ನೇತೃತ್ವದಲ್ಲಿ ಎಡಪದವು ಕಣ್ಣೂರಿ ಮಾಧವ ಗೌಡ ಮತ್ತು ವಾಮನ ಗೌಡ ಅವರ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳು ಸಂಘದ ಸದಸ್ಯರು ಬಹಳ ಉತ್ಸಾಹದಿಂದ ಪಾಲ್ಗೊಂಡು ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು. ಕಾಲೇಜಿನ ಸುಧಾಕರ ಪೂಂಜಾ ಅವರು ಬತ್ತದ ನಾಟಿ, ತಂತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅತಿಥಿಯಾಗಿ ಭಾಗವಹಿಸಿದ್ದ ರಾಮಚಂದ್ರ ಭಟ್ ಅವರು ಬತ್ತದ ಸಸಿಗಳ ಜೀವನ ಕ್ರಮ, ಕೃಷಿ ಮತ್ತು ನಾಟಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.