ಮೂಡುಬಿದರೆ: ಮಣಿಪುರ ಘಟನೆಯನ್ನು ಖಂಡಿಸಿ ಪ್ರತಿಭಟನೆ
ಮೂಡುಬಿದಿರೆ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ಹಾಗೂ ಸೌಹಾರ್ದ ಫ್ರೆಂಡ್ಸ್ ಶಿರ್ತಾಡಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಶಿರ್ತಾಡಿ ಬಸ್ ಸ್ಟ್ಯಾಂಡ್ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ರಾಜಕೀಯ ಸಂಚಾಲಕ ರಾಜೇಶ್ ಕಡಲಕೆರೆ ದಿಕ್ಸೂಚಿ ಭಾಷಣ ಮಾಡಿ ನಾವು ಬೇರೆ ಬೇರೆ ತಂಡಗಳಾಗುವ ಹೊತ್ತಲ್ಲ ಇದು ಎಲ್ಲರೂ ಒಂದಾಗುವ ಹೊತ್ತು. ಯಾಕೆಂದರೆ ನಾವೆಲ್ಲಾ ಬೇರೆ ಬೇರೆ ತಂಡಗಳಾಗಬೇಕು, ಭಾರತ ದೇಶದಲ್ಲಿ ಬೇರೆ ಪಂಗಡಗಳಾಗಬೇಕು ಅದರ ಮೂಲಕ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಬೇಕು ಅಂತಹ ಸೂಚನೆಯ ಫಲಶ್ರುತಿಯೇ ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾತ್ಮಕ ಘಟನೆ ಎಂದು ಆರೋಪಿಸಿದರು. ಚರ್ಚ್‌ನ ಧರ್ಮಗುರು ಹೆರಾಲ್ಡ್ ಮಸ್ಕರೇನಸ್, ಚರ್ಚ್ ಕಮಿಟಿಯ ಅಧ್ಯಕ್ಷ ಹೆರಾಲ್ಡ್ ಡಿ’ಸಿಲ್ವ, ಶಿರ್ತಾಡಿ ಸೌಹಾರ್ದ ಫ್ರೆಂಡ್ಸ್ ನ ಪ್ರವೀಣ್ ಕುಮಾರ್ ವಾಲ್ಪಾಡಿ ಗ್ರಾ.ಪಂನ ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್ ಸಹಿತ ಮುಖಂಡರುಗಳು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಚರ್ಚ್‌ನಿಂದ ಶಿರ್ತಾಡಿ ಪೇಟೆವರೆಗೆ ಮೌನ ಮೆರವಣಿಗೆ ನಡೆಯಿತು.