ಮೂಡುಬಿದಿರೆ : ವಿಸ್ಡಮ್ ಇನ್ಸ್ಟಿಟ್ಯೂಶನ್ಸ್ ನೆಟ್ ವರ್ಕ್ ನ ಮೂರನೇ ಶಾಖೆ ಆರಂಭ

ಮೂಡುಬಿದಿರೆ: ವಿಶ್ ಡಮ್ ಇನ್ಸ್ಟಿಟ್ಯೂಶನ್ಸ್ ನೆಟ್ ವಕ್ ೯ನ ಮೂರನೇ ಶಾಖೆಯು ಮೂಡುಬಿದಿರೆಯ ಪ್ರಭು ಕಾಂಪ್ಲೆಕ್ಸ್ ನಲ್ಲಿ ಸೋಮವಾರ ಉದ್ಘಾಟನೆಗೊಂಡಿತು.


ಭಾರತದ ಒಳಗಡೆ ಮತ್ತು ಹೊರ ದೇಶಗಳಲ್ಲಿ ಉದ್ಯೋಗಾವಕಾಶ ಲಭಿಸಲು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಕೌಶಲಾ ಆಧಾರಿತ ತರಬೇತಿ, ಶುಲ್ಕ ಸಹಿತ ಇಂಟನ್ ಶಿಫ್ ಸೌಲಭ್ಯ, ಕಾಲೇಜುಗಳಲ್ಲಿ ಪಾಲನಾ ಕೇಂದ್ರಗಳು ಮೊದಲಾದ ಉದ್ದೇಶಗಳನ್ನಿಟ್ಟುಕೊಂಡು ಆರಂಭಗೊಂಡಿರುವ ಈ ಕೇಂದ್ರವನ್ನು ಉದ್ಯಮಿ ಕೆ.ಶ್ರೀಪತಿ ಭಟ್ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಪುರಾತನ ಇತಿಹಾಸ ಹೊಂದಿರುವ ಪುಣ್ಯ ಕ್ಷೇತ್ರ ಜೈನ ಕಾಶಿ ಈ ಮೂಡುಬಿದಿರೆ. 18 ಬಸದಿ, ಕೆರೆಗಳು, ದೇವಸ್ಥಾನ, ಮಸೀದಿ, ಚರ್ಚುಗಳನ್ನು ಒಳಗೊಂಡು ಪ್ರಸಿದ್ಧಿಯನ್ನು ಹೊಂದಿರುವ ಈ ಊರು ಇದೀಗ ಇಲ್ಲಿನ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾಕಾಶಿಯಾಗಿ ಬೆಳೆದಿದೆ. ಇದೀಗ ಮತ್ತೆ ಇನ್ನೊಂದು ಶಿಕ್ಷಣ ಸಹಿತ ಉದ್ಯೋಗವಕಾಶಕ್ಕೆ ತೆರೆದುಕೊಳ್ಳುತ್ತಿರುವ ವಿಶ್ ಡಮ್ ಇನ್ಸ್ಟಿಟ್ಯೂಶನ್ ಸೇರ್ಪಡೆಗೊಳ್ಳುವ ಮೂಲಕ ಮತ್ತೊಂದು ಗರಿಯನ್ನು ಹೆಚ್ಚಿಸಿದೆ. ಇಲ್ಲಿನ ತರಬೇತಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡುವುದಲ್ಲದೆ ನಂತರ ಉದ್ಯೋಗವನ್ನು ಪಡೆಯಲು ಸರಿಯಾದ ಮಾಹಿತಿಯನ್ನು ನೀಡುವ ಹಾಗೂ ಕಂಪನಿಗಳೊಂದಿಗೆ ಯಾವ ರೀತಿಯಾಗಿ ಸ್ಪಂದಿಸಬೇಕೆಂಬ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಲು ಈ ಸಂಸ್ಥೆಯು ಸಹಕಾರಿಯಾಗಲಿದೆ ಎಂದರು.


ನೋಟರಿ, ವಕೀಲೆ ಶ್ವೇತಾ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು.

ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಅತಿಥಿಯಾಗಿ ಭಾಗವಹಿಸಿದ್ದರು.
ಸಂಸ್ಥೆಯ ಕೋ ಪೌಂಡರ್, ಡೈರೆಕ್ಟರ್ ಡಾ.ಫ್ರಾನ್ಸಿಸ್ಕಾ ತೇಜ್, ಚೀಫ್ ಅಕಾಡೆಮಿಕ್ ಆಫೀಸರ್ ಡಾ.ಗುರುತೇಜು,ಮಣಿಪಾಲ ಪಾರ್ಟ್‌ನರ್ ಅರುಣ್ ಕುಮಾರ್, ಮೂಡುಬಿದಿರೆ ಸಿಟಿ ಪಾರ್ಟ್‌ನರ್ ಉಮೇಶ್ ಪೂಜಾರಿ ಈ ಸಂದರ್ಭದಲ್ಲಿದ್ದರು.
ಏಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯು ಮಣಿಪಾಲ, ಉಡುಪಿ, ಮೂಡುಬಿದಿರೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸಲು ಆರಂಭಿಸಿವೆ. ಇನ್ನು ಪುತ್ತೂರು, ಹಾಸನದಲ್ಲಿಯೂ ಸಂಸ್ಥೆಯು ತೆರೆದುಕೊಳ್ಳಲಿದ್ದು ಮಂಗಳೂರಿನಲ್ಲಿ ಕೇಂದ್ರ ಬ್ರಾಂಚನ್ನು ಹೊಂದಿದೆ.

Related Posts

Leave a Reply

Your email address will not be published.