ಅಯೋಧ್ಯೆಯಲ್ಲಿ ಪಲ್ಲಕಿ ಸೇವೆಗೈದ ಮೂಡುವೇಣುಪುರದೊಡೆಯನ ಸೇವಕರು

ಮೂಡುಬಿದಿರೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲ ಪೂಜೆ ಮತ್ತು ಉತ್ಸವದಲ್ಲಿ, ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಸ್ವಯಂಸೇವಕರ ತಂಡ ನಿರಂತರ 3 ದಿನಗಳ ಕಾಲ ಪಲ್ಲಕ್ಕಿ ಹೊರುವ ಸೇವೆಯಲ್ಲಿ ಪಾಲ್ಗೊಂಡರು.

ಮದ್ವ ನವಮಿ ಶುಭ ಸಂದರ್ಭದಲ್ಲಿ ಮೂಲ ಮೂರ್ತಿ ಶ್ರೀ ಬಾಲ ರಾಮನಿಗೆ ಭೋಗ ನೈವೇದ್ಯವನ್ನು ನೀಡುವ ಅವಕಾಶವನ್ನೂ ಪಡೆದು ಪೇಜಾವರ ಸ್ವಾಮೀಜಿಯವರಿಂದ ಮಂತ್ರಾಕ್ಷತೆ ಪಡೆದುಕೊಂಡರು.

Related Posts

Leave a Reply

Your email address will not be published.