ಗುತ್ತಿಗೆದಾರನನ್ನು ಹೊಗಳಿದ ಸುಪ್ರಿಂ ಕೋಟ್ ೯ನ ಮುಖ್ಯ ನ್ಯಾಯಾಧೀಶರು

ಮೂಡುಬಿದಿರೆಯ ವಕೀಲರ ಸಂಘದ ವತಿಯಿಂದ ರೂ 3 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಕೀಲರ ಭವನದ ಕಾಮಗಾರಿ ಅಚ್ಚುಕಟ್ಟಾಗಿ ಒಳ್ಳೆಯ ರೀತಿಯಲ್ಲಿ ನಡೆದಿದೆ ನಿಮಗೆ ಅಭಿನಂದನೆಗಳು ಎಂದು ಕಟ್ಟಡ ನಿರ್ಮಾಣದ ಗುತ್ತಿಗೆದಾರ, ಬಿಮಲ್ ಕನ್ಟ್ರಕ್ಷನ್ ನ ಪ್ರವೀಣ್ ಅವರನ್ನು ಸುಪ್ರಿಂ ಕೋಟ್ ೯ನ ಮುಖ್ಯ ನ್ಯಾಯಾಧೀಶ ಅಬ್ದುಲ್ ನಝೀರ್ ಅವರು ಅಭಿನಂದಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಡಿಸೆಂಬರ್ 30ರಂದು ವಕೀಲರ ಭವನವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ.ಅಬ್ದುಲ್ ನಜೀರ್ ರವರು ಭವನವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ತಮ್ಮ ಭಾಷಣದ ಮಧ್ಯೆ ಗುತ್ತಿಗೆದಾರ ಪ್ರವೀಣ್ ಅವರ ಕಾರ್ಯದಕ್ಷತೆಯನ್ನು ಗುರುತಿಸಿದ ನ್ಯಾಯಮೂರ್ತಿಗಳು “ಭವನದ ಕಾಮಗಾರಿಯನ್ನು ಅತ್ಯಂತ ಸುಂದರವಾಗಿಯೂ ಮತ್ತು ಅಚ್ಚಕಟ್ಟಾಗಿಯೂ ನಿರ್ಮಿಸಿದ್ದೀರಿ. ನಿಮಗೆ ಅಭಿನಂದನೆಗಳು. ಒಳ್ಳೆಯ ಕೆಲಸ ಮಾಡಿದ್ದೀರಿ” ಎಂದು ಹಾಡಿ ಹೊಗಳಿದ್ದಾರೆ. ಮಾತ್ರವಲ್ಲದೆ ಖುದ್ದು ತಾವೇ ಅವರನ್ನು ವೇದಿಕೆಗೆ ಆಹ್ವಾನಿಸಿ ಸ್ಮರಣಿಕೆ ನೀಡಿ ಗೌರವಿಸಿದ್ದಾರೆ.

ಎರಡು ತಿಂಗಳ ಹಿಂದೆ ಭವನದ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ನ್ಯಾ.ನಜೀರ್ ರವರು ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿದ್ದಾನೆ, ಆತನ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಹೇಳಿದ್ದಾರೆ ಎಂಬ ಸುದ್ಧಿಗಳು ಸಾಮಾಜಿಕ ಜಾಲತಾಣ ಹಾಗೂ ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಗುತ್ತಿಗೆದಾರ ಪ್ರವೀಣ್ ಅವರ ಬಗ್ಗೆ ವೈಯಕ್ತಿಕ ದ್ವೇಷ ಇಟ್ಟುಕೊಂಡವರ ಕೃತ್ಯ ಎಂದು ಪ್ರವೀಣ್ ಅವರ ಕೆಲ ಮಿತ್ರರು ಈ ಸಂದರ್ಭದಲ್ಲಿ ಹೇಳಿ ಕೊಂಡಿದ್ದರು. ಮತ್ತು ಇಂತಹಾ ಯಾವುದೇ ಘಟನೆಗಳು ನಡೆದಿಲ್ಲ, ನ್ಯಾಯಮೂರ್ತಿಗಳು ಇಂಜಿನಿಯರ್ ಮೂಲಕ ಗುತ್ತಿಗೆದಾರರಿಗೆ ಸಲಹೆ ನೀಡಿದ್ದಾರೆ ಅಷ್ಟೇ ಎಂಬ ವರದಿಯೂ ಸಾಮಾಜಿಕ ತಾಣಗಳಲ್ಲಿ ಪ್ರಕಟಗೊಂಡಿತ್ತು.

ಇದೀಗ ಸ್ವತಃ ನ್ಯಾಯಮೂರ್ತಿಗಳೇ ಉದ್ಘಾಟನ ಸಮಾರಂಭದಲ್ಲಿ ಬಹಿರಂಗವಾಗಿ ಗುತ್ತಿಗೆದಾರರ ಕಾರ್ಯದಕ್ಷತೆಯನ್ನು ಮೆಚ್ಚಿ ಕೊಂಡಾಡಿದ್ದು ಎಲ್ಲಾ ಊಹಾಪೋಹಗಳು ಹಾಗೂ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.

Related Posts

Leave a Reply

Your email address will not be published.