ಮುತ್ತೂಟ್ ಸಾಮಾಜಿಕ ಜವಾಬ್ದಾರಿ ವಿಭಾಗ : ಶೈಕ್ಷಣಿಕ ಗೋಡೆ ಬರಹದ ಅನಾವರಣ
ಮಂಗಳೂರಿನ ಪರಪಾದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಗೋಡೆ ಬರಹವನ್ನು ಮಂಗಳೂರು ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಅನಾವರಣಗೊಳಿಸಿದರು.
ಕಾರ್ಯಕ್ರಮವು ಮುತ್ತೂಟ್ ಸಾಮಾಜಿಕ ಜವಾಬ್ದಾರಿ ವಿಭಾಗ ಮತ್ತು ಪ್ರಥ್ವಿ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವೇರಿತು. ಇದೇ ವೇಳೆ ಮಂಗಳೂರು ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಅವರು ಮಾತನಾಡಿ, ಮುತ್ತೂಟ್‍ನ ಸಿಎಸ್‍ಆರ್ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಗಾಯತ್ರಿ ರಾವ್ ಮತ್ತು ರಂಜನಿ, ಮುತ್ತೂಟ್ ರೀಜನಲ್ ಆಪರೇಷನ್ ಮ್ಯಾನೇಜರ್ ಮೋನಿಷಾ ಎಂ ಕೆ, ಆಶಾ ಹೆಗ್ಡೆ, ಅಧ್ಯಕ್ಷರಾದ ತರಂಗ, ಪ್ರಥ್ವಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಲೋಲಾಕ್ಷಿ ಫೆರ್ನಾಂಡಿಸ್, ಮುತ್ತೂಟ್ ಫೈನಾನ್ಸ್ ಕೊಟ್ಟಾರ ಶಾಖೆಯ ಸುನಿಲ ವಿ.ಕೆ, ಎಸ್‍ಡಿಎಂಸಿ ಅಧ್ಯಕ್ಷರಾದ ಮೈಮುನಾ, ಮಂಗಳೂರು ವಿಭಾಗ ಸಿಎಸ್‍ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್, ಮಂಗಳೂರು ರೀಜನಲ್ ಮ್ಯಾನೇಜರ್ ಲತೀಶ್ ಕುಮಾರ್ ರಿಸೋಸ್, ಮಂಗಳೂರು ರೀಜನಲ್‍ನ ಬಿಡಿಎಂ
ನೋಯೆಲ್ ಕುಮಾರ್, ಮುತ್ತೂಟ್ ಫೈನಾನ್ಸ್ ಎಂಜಿಬಿಸಿ ಪ್ರಜ್ವಲ್ ಕುಮಾರ್ ಹಾಗೂ ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಪರಪಾದೆ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಖಾ ಸ್ವಾಗತಿಸಿ, ಸುಮತಿ ಬಾಯಿ ಎ.ಸಿ ಕಾರ್ಯಕ್ರಮ ನಿರೂಪಿಸಿದರು.