ನವ ಮಂಗಳೂರು ಬಂದರು- ಕರ್ನಾಟಕ ರಾಜ್ಯೋತ್ಸವ ಆಚರಣೆ
ನವ ಮಂಗಳೂರು ಬಂದರು ಪ್ರಾಧಿಕಾರವು, ನಮಬ ಕನ್ನಡ ಸಂಘದ ಜೊತೆಗೂಡಿ 66 ನೇ ಕರ್ನಾಟಕ ಸಂಸ್ಥಾಪನಾ ದಿನ ಹಾಗು ಕರ್ನಾಟಕ ರಾಜ್ಯೋತ್ಸವವನ್ನು ಇಂದು ಆಚರಿಸಲಾಯಿತು
ಬಂದರು ಪ್ರಾಧಿಕಾರದ ಅಧ್ಯಕ್ಷರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಹಾಗು ಕೆನರಾ ಪಿಯು ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ರಘು ಇಡ್ಕಿಧು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.ಉಪಾಧ್ಯಕ್ಷರು, ಮುಖ್ಯ ವಿಜಿಲೆನ್ಸ್ ಅಧಿಕಾರಿ ಮತ್ತು ಅಧ್ಯಕ್ಷರು, ಕಾರ್ಯದರ್ಶಿ ಕನ್ನಡ ಸಂಘದ ಗೌರವ ಅತಿಥಿಗಳಾಗಿದ್ದರು.ಬಂದರು ಪ್ರಾಧಿಕಾರದ ಅಧ್ಯಕ್ಷರು ಕನ್ನಡೇತರ ಭಾಷಿಕರಾಗಿದ್ದರೂ ಕರ್ನಾಟಕ ರಾಜ್ಯ ರಚನೆ ದಿನದ ಅಂಗವಾಗಿ ಕನ್ನಡದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.